Mysore
25
light rain

Social Media

ಸೋಮವಾರ, 03 ಆಗಸ್ಟ್ 2026
Light
Dark

ಹನೂರು| ಕಾಡಾನೆ ದಾಳಿ ವ್ಯಕ್ತಿ ಸಾವು

ಹನೂರು: ಕಾರ್ಯನಿಮಿತ್ತ ಗೊಂಬೆಗಲ್ಲು ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ಆಗಮಿಸುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾರಿ ನಡೆಸಿ ಸಾಯಿಸಿರುವ ಘಟನೆ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ನೆಲ್ಲಿಕತ್ತರಿ ಸಮೀಪ ಜರುಗಿದೆ.

ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಬೆಗಲ್ಲು ಗ್ರಾಮದ ಕೇತೇಗೌಡ (75) ಎಂಬುವವರೇ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಘಟನೆ ವಿವರ: ಇಂದು ಬೆಳಿಗ್ಗೆ ಗೊಂಬೆಗಲ್ಲು ಗ್ರಾಮದ ಕೇತೇಗೌಡ ಕಾರ್ಯನಿಮಿತ್ತ ಒಡೆಯರ ಪಾಳ್ಯಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ನೆಲ್ಲಿಕತ್ತರಿ ಸಮೀಪ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ತೀವ್ರ ಗಾಯಗೊಂಡು ಕೇತೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಿಆರ್‌ಟಿ ಹುಲಿ ಸಂರಕ್ಷಿತ ವ್ಯಾಪ್ತಿಯ ಡಿಸಿಎಫ್ ಶ್ರೀಪತಿ, ಬೈಲೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!