Mysore
24
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ವನ್ಯಪ್ರಾಣಿ ತಡೆಗೆ ಜಾಲರಿಮೇಸ್ ಜೋಡಣೆ

ಎಚ್.ಡಿ ಕೋಟೆ : ಅಂತರಸಂತೆ ಮೀಸಲು ಅರಣ್ಯ ವಲಯದ ದಮ್ಮನಕಟ್ಟೆ ಭಾಗದ ಕಾಡಂಚಿನ ಗ್ರಾಮಗಳಿಗೆ ಪ್ರಯೋಗಿಕವಾಗಿ ಕಾಡಿನಿಂದ ಊರುಗಳಿಗೆ ವನ್ಯಪ್ರಾಣಿಗಳು ಬರದ ಹಾಗೆ ರೈಲ್ವೆ ಕಂಬಿ ತಡೆಗೋಡೆಗಳಿಗೆ ಜಾಲರಿಮೇಸ್ ಗಳನ್ನು ಜೋಡಿಸಲಾಯಿತು.

ಎಚ್.ಡಿ. ಕೋಟೆ ಮತ್ತು ಸರಗೂರು ಭಾಗದಲ್ಲಿ ಕಾಡಿನಿಂದ ನಾಡಿಗೆ ಕಾಡುಪ್ರಾಣಿಗಳು ದಾಳಿ ಮಾಡಿ ರೈತರ ಬೆಳೆದ ಬೆಳೆನಾಶ ಮಾಡುತ್ತಿರುವುದಲ್ಲದೆ ಇತ್ತೀಚಿಗೆ ಹುಲಿದಾಳಿಯಿಂದ ಮೂರು ಜನ ರೈತರನ್ನು ಬಲಿ ಪಡೆದು, ಒಬ್ಬ ರೈತನನ್ನ ಶಾಶ್ವತವಾಗಿ ಅಂದತ್ವವಾಗುತಂತೆ ದಾಳಿಯಾಗಿತ್ತು. ಇಷ್ಟೇ ಅಲ್ಲದೇ ಕಾಡಂಚಿನ ಗ್ರಾಮಗಳಲ್ಲಿ ದಿನವೂ ಎಂಬಂತೆ ಹಸು ಕರು ಮೇಕೆಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದವು ಇದನ್ನ ಮನಗಂಡ ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆದು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು ಮತ್ತು ಅರಣ್ಯ ಅಧಿಕಾರಿಗಳು ಮಾನವ ಪ್ರಾಣಿ ಸಂಘರ್ಷ ತಡೆಗೆ ಹಗಲು ರಾತ್ರಿ ನಿರಂತರವಾಗಿ ಕಾವಲು ಕಾಯುತ್ತಾ ಹುಲಿ ಸೆರೆಹಿಡಿಯುವ ಕಾರ್ಯಚರಣೆ ಕೈಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರು ಮೂಲದ ಶ್ರೀಧರ್ ಎಂಬುವರು ಜಾಲರಿ ಮೇಸ್ ಅನ್ನು ಕೊಡುಗೆ ನೀಡಿದ್ದಾರೆ. ಅದನ್ನ ಶಾಸಕರು ಮತ್ತು ಅರಣ್ಯ ಅಧಿಕಾರಿಗಳು ಪ್ರಯೋಗಿಕವಾಗಿ ರೈಲ್ವ ಕಂಬಿಗಳಿಗೆ ಜಾಲರಿ ಜೋಡಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಎಸಿಎಫ್ ಮಧುದೇವಯ್ಯ, ಆರ್.ಎಫ಼್.ಒ ಸಿದ್ದರಾಜ್, ರೈತ ಕಲ್ಯಾಣ ಸಂಘದ ಜಿಲ್ಲಾಧ್ಯಾಕ್ಷ ಚಂದನ್ ಗೌಡ, ಜಿಲ್ಲಾ ಪಂ ಮಾಜಿ ಸದಸ್ಯ ನರಸೀಪುರ ರವಿ, ಗ್ರಾಪಂ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತು ರೈತ ಮುಖಂಡರು ಇಲಾಖಾ ಅಧಿಕಾರಿಗಳು ಹಾಜರಿದ್ದರು.

Tags:
error: Content is protected !!