ಹೊಸದಿಲ್ಲಿ : ದಿಲ್ಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣ ಸಂಬಂಧ ಸಂಚುಕೋರ ಅಮೀರ್ ರಶೀದ್ ಅಲಿನನ್ನು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶಕ್ಕೆ ನೀಡಲಾಗಿದೆ.
ಈ ಬಗ್ಗೆ ದಿಲ್ಲಿ ನ್ಯಾಯಾಲಯ ಆದೇಶಿಸಿದ್ದು, ಸೋಮವಾರ ಬೆಳಿಗ್ಗೆ ಸಂಚೋಕೊರನನ್ನು ನ್ಯಾಯಾಧೀಶರ ಮುಂದೆ ಬಿಗಿಭದ್ರತೆಯ ನಡುವೆ ಹಾಜರುಪಡಿಸಲಾಗಿತ್ತು. ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ನವೆಂಬರ್ 10ರ ಸಂಜೆ ಸುಮಾರು 6:40ರ ವೇಳೆಗೆ ಕೆಂಪು ಕೋಟೆಯ ಸಮೀಪ ಸಂಭವಿಸಿದ್ದ ಕಾರು ಸ್ಪೋಟದಲ್ಲಿ 13 ಮಂದಿ ಮೃತಪಟ್ಟು ಹಲವರು ಗಂಭೀರವಾಗಿದ್ದರು.
ಪ್ರಕರಣ ಸಂಬಂಧ ಪ್ರಮುಖ ಸಂಚುಕೋರ ಅಮೀರ್ ರಶೀದ್ ಅಲಿನನ್ನು ಎನ್‌ಐಎ ಅಧಿಕಾಇಗಳು ನ.16 ರಂದು ಬಂದಿಸಿದ್ದರು.





