Mysore
26
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಹೆಡಿಯಾಲ ಸಮೀಪ ಹುಲಿ ಓಡಾಟ ; ಸಾಕಾನೆ ಮೂಲಕ ಕೂಂಬಿಂಗ್‌ 

ನಂಜನಗೂಡು : ತಾಲ್ಲೂಕಿನ ಹೆಡಿಯಾಲ ಸಮೀಪದ ಚಿಲಕಹಳ್ಳಿ ಸುತ್ತಮುತ್ತ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿಲಕಹಳ್ಳಿ ಗ್ರಾಮದ ಜಮೀನುಗಳಲ್ಲಿ ಹುಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಡ್ರೋನ್ ಕ್ಯಾಮರದಲ್ಲಿ ಹುಲಿ ಪತ್ತೆಯಾಗಿದೆ.

ರಾತ್ರಿ 11:30 ಸಮಯದಲ್ಲಿ ಚಿಲಕಹಳ್ಳಿ ಗ್ರಾಮದ ಬಳಿ ಹುಲಿಮರಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ತಿಳಿದಿದೆ.

ಈ ಹಿನ್ನಲೆ ಮುಂಜಾನೆಯಿಂದಲೇ ಸಾಕಾನೆಗಳಾದ ಭೀಮಾ, ಮಹೇಂದ್ರ, ಸುಗ್ರೀವ ಆನೆಗಳ ಮೂಲಕ ಬಂಡಿಪುರ ಅರಣ್ಯ ವಲಯದ ಸಿ ಎಫ್ ಪ್ರಭಾಕರ್, ಎ ಸಿ ಎಫ್ ಪರಮೇಶ್ ಡಿ, ಆರ್ ಎಫ್ ಒ ರಾಮಾಂಜನೇಯಲು, ಡಿ ಆರ್ ಎಫ್ ಓ ಕಾರ್ತಿಕ್, ರಘುನಾಥ್ ಡಿ ಗೌಡ, ಪಶು ವೈದ್ಯ ವಶೀಮ್ ಮಿರ್ಜಾ, ಶಾರ್ಫ್ ಶೂಟರ್ ಅಕ್ರಮ್, ವಾಹನ ಚಾಲಕ ಮುಬಾರಕ್ ಸೇರಿದಂತೆ 30ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿಲಕಹಳ್ಳಿ ಸುತ್ತಮುತ್ತಲಿನ ಸುಮಾರು ಆರು ಕಿಲೋ ಮೀಟರ್ ವ್ಯಾಪ್ತಿಯ ರೈತರ ಜಮೀನಿನ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ಮುಂದಾಗಿದ್ದಾರೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಡ್ರೋನ್ ಕ್ಯಾಮರಾದಲ್ಲಿ ಸುಮಾರು ಒಂದುವರೆ ವರ್ಷದ ಹುಲಿ ಮರಿ ಪತ್ತೆಯಾಗಿದೆ. ಕಾರ್ಯಚರಣೆ ಸಂದರ್ಭದಲ್ಲಿ ಸಾರ್ವಜನಿಕರಿಂದ ತೊಂದರೆಯಾಗದಂತೆ ಹುಲ್ಲಹಳ್ಳಿ ಠಾಣೆಯ ಪೊಲೀಸರು ಹಾಗೂ ಮೈಸೂರಿನ ಮೀಸಲು ಪಡೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಮುಂಜಾನೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ ಹುಲಿಮರಿ ಕಾಣಿಸಿ ಕೊಂಡಿದ್ದಾದರೂ ಜಮೀನಿನ ಭಾಗಗಳಲ್ಲಿ ಸಾಕಷ್ಟು ಪೊದೆಗಳು ಬೆಳೆದು ನಿಂತಿರುವ ಕಾರಣ ಸೆರೆ ಹಿಡಿಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ 4 ರ ನಂತರ ಮತ್ತೆ ಕಾರ್ಯಾಚರಣೆ ಮುಂದುವರೆಯಲಿದ್ದು ಹುಲಿ ಮರಿಯನ್ನು ಸೆರೆ ಹಿಡಿಯುವ ಆತ್ಮವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Tags:
error: Content is protected !!