Mysore
22
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮೈಸೂರು ಜಿಲ್ಲೆಯಲ್ಲಿ ಮುಂದುವರಿದ ವ್ಯಾಘ್ರನ ಅಟ್ಟಹಾಸ

ಎಚ್.ಡಿ.ಕೋಟೆ: ಮೈಸೂರು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮುಂದುವರಿದಿದ್ದು, ಎನ್.ಬೆಳತ್ತೂರು ಗ್ರಾಮದಲ್ಲಿ ಬಸವನ ಮೇಲೆ ಹುಲಿ ದಾಳಿ ಮಾಡಿ ಕೊಂದುಹಾಕಿದೆ.

ಕಾಡಂಚಿನ ಗ್ರಾಮವಾದ ಎನ್.ಬೆಳತ್ತೂರಿನಲ್ಲಿ ಊರ ಬಸವನ ಮೇಲೆ ಹುಲಿ ದಾಳಿ ನಡೆಸಿದ್ದು, ಗ್ರಾಮಸ್ಥರು ತೀವ್ರ ಭಯಭೀತರಾಗಿದ್ದಾರೆ. ಗ್ರಾಮದ ಮಗ್ಗೆ ಮರಳಿ ದೇವಸ್ಥಾನದ ಮುಂಭಾಗವಿದ್ದ ಬಸವನ ಮೇಲೆ ದಾಳಿ ನಡೆಸಿರುವ ಹುಲಿ ಅರ್ಧ ಭಾಗವನ್ನು ತಿಂದು ತೇಗಿದೆ.

ಇದನ್ನು ಓದಿ: ಹುಲಿ ದಾಳಿಗೆ ಹಸು ಸಾವು, ಮತ್ತೊಂದು ಗಂಭೀರ

ಸಾವನ್ನಪ್ಪಿದ ಬಸವನ ಮುಂದೆ ಜನರು ಕಣ್ಣೀರಾಕಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹುಲಿ ಸೆರೆ ಹಿಡಿಯುವ ಭರವಸೆ ನೀಡಿದ್ದು, ಅನವಶ್ಯಕವಾಗಿ ಹೊರಗೆ ಬರದಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.

Tags:
error: Content is protected !!