Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿ ಜೇಮ್ಸ್‌ ವಾಟ್ಸನ್‌ ನಿಧನ

ನ್ಯೂಯಾರ್ಕ್:‌ ನೊಬೆಲ್‌ ಪ್ರಶಸ್ತಿ ವಿಜೇತ ಅಮೆರಿಕನ್‌ ವಿಜ್ಞಾನಿ ಹಾಗೂ ಡಿಎನ್‌ಎ ರಚನೆಯ ಸಹ ಆವಿಷ್ಕಾರರಾದ ಜೇಮ್ಸ್‌ ವಾಟ್ಸನ್‌ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.

1953ರಲ್ಲಿ ಬ್ರಿಟಿಷ್‌ ವಿಜ್ಞಾನಿ ಫ್ರಾನ್ಸಿಸ್‌ ಕ್ರಿಕ್‌ ಅವರೊಂದಿಗೆ ಸೇರಿ ಡಿಎನ್‌ಎಯ ಡಬಲ್‌-ಹಿಲಿಕ್ಸ್‌ ರಚನೆಯನ್ನು ಇವರು ಗುರುತಿಸಿದ್ದರು. ಇದರಿಂದ ಆಣ್ವಿಕ ಜೀವಶಾಸ್ತ್ರದ ಸಂಶೋಧನೆಗೆ ಹೊಸ ಮೈಲಿಗಲ್ಲು ಸಿಕ್ಕಿತ್ತು. ಜೇಮ್ಸ್‌ ವಾಟ್ಸನ್‌ ಅವರ ನಿಧನದ ವಿಷಯವನ್ನು ಕೋಲ್ಡ್‌ ಸ್ಟ್ರಿಂಗ್‌ ಹಾರ್ಬರ್‌ ಲ್ಯಾಬೋರೇಟರಿ ದೃಢಪಡಿಸಿದೆ.

ಇನ್ನು ಕಪ್ಪು ಹಾಗೂ ಬಿಳಿ ಜನರ ನಡುವೆ ಸರಾಸರಿ ಐಕ್ಯೂ ವ್ಯತ್ಯಾಸಕ್ಕೆ ಜೀನ್ಸ್‌ ಕಾರಣವೆಂದು ಕಾರ್ಯಕ್ರಮವೊಂದರಲ್ಲಿ ವಾಟ್ಸನ್‌ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ನೊಬೆಲ್‌ ಚಿನ್ನದ ಪದಕವನ್ನು 2014ರಲ್ಲಿ ಹರಾಜಿನಲ್ಲಿ ಮಾರಿದ್ದು ಕೂಡ ಜನರು ಹುಬ್ಬೇರುವಂತೆ ಮಾಡಿತ್ತು.

Tags:
error: Content is protected !!