Mysore
32
scattered clouds

Social Media

ಸೋಮವಾರ, 09 ಮಾರ್ಚ್ 2026
Light
Dark

ನಟ ರಜನಿಕಾಂತ್‌ ಅಣ್ಣನಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅಣ್ಣ ಸತ್ಯನಾರಾಯಣ ರಾವ್‌ ಗಾಯಕ್ವಾಡ್‌ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.

ಸತ್ಯನಾರಾಯಣ ರಾವ್‌ ಗಾಯಕ್ವಾಡ್‌ ಅವರಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ನಟ ರಜಿನಿಕಾಂತ್‌ ಆಗಮಿಸಿದ್ದಾರೆ.

ರಜಿನಿಕಾಂತ್‌ ಅವರೇ ಸತ್ಯನಾರಾಯಣ ರಾವ್‌ ಗಾಯಕ್ವಾಡ್‌ ಅವರನ್ನು ನಾರಾಯಣ ಹೃದಯಾಲಯಕ್ಕೆ ದಾಖಲಿಸಿದ್ದಾರೆ.

ಸತ್ಯನಾರಾಯಣ ರಾವ್‌ ಅವರಿಗೆ ಹೃದಯಾಘಾತ ಆಗಿರುವ ಹಿನ್ನೆಲೆಯಲ್ಲಿ ರಜಿನಿಕಾಂತ್‌ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.

Tags:
error: Content is protected !!