Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

ಶಾಸಕ ಸತೀಶ್‌ ಸೈಲ್‌ ಜಾಮೀನು ರದ್ದು

satishc sail

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್‌ ಸೈಲ್‌ ಅವರ ಮಧ್ಯಂತರ ಜಾಮೀನು ರದ್ದುಪಡಿಸಲಾಗಿದೆ.

ಬೆಲೇಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿದ್ದ ಸತೀಶ್‌ ಸೈಲ್‌ ಅವರಿಗೆ ನವೆಂಬರ್.7ರವರೆಗೆ ಜಾಮೀನು ವಿಸ್ತರಣೆ ಮಾಡಲಾಗಿತ್ತು. ನಿನ್ನೆ ಅವರ ಜಾಮೀನು ರದ್ದು ಮಾಡಲಾಗಿದ್ದು, ಸತೀಶ್‌ ಸೈಲ್‌ ಮತ್ತೆ ಜೈಲು ಸೇರುವಂತಾಗಿದೆ.

ಇದನ್ನು ಓದಿ: ಶಾಸಕ ಸತೀಶ್‌ ಸೈಲ್‌ ಬಂಧನ: ಕಾಂಗ್ರೆಸ್ಸಿಗರೇ ಟಾರ್ಗೆಟ್‌ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್‌

ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಶಾಸಕರು ಜೈಲು ಪಾಲಾಗಿದ್ದರು. ಅವರ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಇಡಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದರು. ಅಕ್ಟೋಬರ್.‌25ರವರೆಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಚಿಕಿತ್ಸೆ ಕಾರಣದಿಂದ ಜಾಮೀನು ವಿಸ್ತರಿಸುವಂತೆ ಮಾಡಿದ್ದ ಮನವಿಯನ್ನು ಪರಿಗಣಿಸಿ ನವೆಂಬರ್.‌7ರವರೆಗೆ ಜಾಮೀನು ವಿಸ್ತರಿಸಲಾಗಿತ್ತು.

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡಿದ್ದರು. ನಿನ್ನೆ ಜಾಮೀನು ರದ್ದುಪಡಿಸಲಾಗಿದ್ದು, ಮತ್ತೆ ಜೈಲು ಸೇರುವಂತಾಗಿದೆ.

Tags:
error: Content is protected !!