Mysore
23
overcast clouds

Social Media

ಮಂಗಳವಾರ, 26 ಮೇ 2026
Light
Dark

ಓದುಗರ ಪತ್ರ: ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ತಿಳಿದವರ ನೇಮಕ ಸ್ವಾಗತಾರ್ಹ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಥಳೀಯ ಭಾಷೆ ತಿಳಿದವರನ್ನು ನೇಮಕ ಮಾಡಿಕೊಳ್ಳುವಂತೆ ವಿತ್ತ ಸಚಿವರು ಬ್ಯಾಂಕುಗಳಿಗೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ನೀತಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿಕೊಳ್ಳುವಂತೆ ಆದೇಶಿಸಿದ್ದಾರೆ. ದಿನ ನಿತ್ಯದ ಬ್ಯಾಂಕ್ ವ್ಯವಹಾರಗಳಲ್ಲಿ ಭಾಷಾ ಸಂಘರ್ಷ ಉಂಟಾಗುವುದನ್ನು ಗಮನಿಸಿರುವ ಅವರು, ಈ ಸೂಚನೆ ಕೊಟ್ಟದ್ದಾರೆ ಎನ್ನಲಾಗುತ್ತದೆ. ಭಾಷಾ ಭಿನ್ನತೆಯಿಂದಾಗಿ ಬ್ಯಾಂಕ್ ಶಾಖೆಗಳಲ್ಲಿ ಸಿಬ್ಬಂದಿ ಜತೆ ಗ್ರಾಹಕರ ಸಂಪರ್ಕ ಕಡಿಮೆಯಾಗಿ, ಸಾಲ ನೀಡುವಾಗ ಬ್ಯಾಂಕ್ ಗ್ರಾಹಕರ ಬಗ್ಗೆ ತಿಳಿದುಕೊಳ್ಳಲು ಹೊರಗಿನ ಏಜೆನ್ಸಿಯನ್ನು ಅವಲಂಬಿಸ ಬೇಕಾಗಿರುವುದನ್ನು ಅವರು ಉಲ್ಲೇಖಿಸಿದ್ದಾರೆ. ಸ್ವಲ್ಪ ವಿಳಂಬವಾದರೂ ವಿತ್ತ ಸಚಿವರು ಬ್ಯಾಂಕುಗಳಲ್ಲಿ ಉದ್ಭವಿಸಿರುವ ಭಾಷಾ ಸಮಸ್ಯೆಯನ್ನು ಅರ್ಥಮಾಡಿ ಕೊಂಡಿರುವುದು ಒಳ್ಳೆಯ ಬೆಳವಣಿಗೆ.

-ರಮಾನಂದ ಶರ್ಮಾ, ಬೆಂಗಳೂರು

 

 

Tags:
error: Content is protected !!