Mysore
27
few clouds

Social Media

ಗುರುವಾರ, 22 ಜನವರಿ 2026
Light
Dark

ಮತ್ತೆ ಕೆಂಪಾದ JNU : ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ ಎಡ ಒಕ್ಕೂಟಕ್ಕೆ ಭರ್ಜರಿ ಗೆಲುವು

ಹೊಸದಿಲ್ಲಿ : ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಪ್ರಮುಖ ನಾಲ್ಕೂ ಸ್ಥಾನಗಳಲ್ಲಿ ಎಡ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಜಯ ಸಾಧಿಸಿವೆ. ಈ ಮೂಲಕ ಆರ್‌ಎಸ್‌ಎಸ್‌ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿಕಾಸ್‌ ‍ಪಟೇಲ್‌ ಅವರನ್ನು ಸೋಲಿಸಿವೆ.

ಅಖಿಲ ಭಾರತ ವಿದ್ಯಾರ್ಥಿಗಳ ಅಸೋಸಿಯೇಷನ್‌ (ಎಐಎಸ್‌ಎ), ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ), ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಫೆಡರೇಷನ್‌ (ಡಿಎಸ್‌ಎಫ್) ಸಂಘಟನೆಳು ಎಡ ಒಕ್ಕೂಟದ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿವೆ.

ಇದನ್ನೂ ಓದಿ:-ಮೈಸೂರು : ಸೆಸ್ಕ್‌ನಿಂದ ವಿದ್ಯುತ್‌ ಬಿಲ್‌ ಬಾಕಿ ವಸೂಲಾತಿ ಅಭಿಯಾನ

ಎಬಿವಿಪಿಯ ವಿಕಾಸ್‌ ‍ಪಟೇಲ್‌ ಅವರನ್ನು 449 ಮತಗಳಿಂದ ಸೋಲಿಸಿ ಅದಿತಿ ಮಿಶ್ರಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರ ಸ್ಥಾನಕ್ಕೆ ಗೋಪಿಕಾ ಬಾಬು, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್‌ ಯಾದವ್, ಜಂಟಿ ಕಾರ್ಯದರ್ಶಿಯಾಗಿ ಡ್ಯಾನಿಶ್‌ ಅಲಿ ಗೆಲುವು ಸಾಧಿಸಿದ್ದಾರೆ.

ಎಡ ಒಕ್ಕೂಟದ ಪ್ರಬಲ ಪ್ರಚಾರ, ವಿದ್ಯಾರ್ಥಿ ಹಕ್ಕುಗಳ ಕುರಿತು ಘೋಷಣೆಗಳು ಹಾಗೂ ಕ್ಯಾಂಪಸ್‌ನಲ್ಲಿ ನಡೆದ ಚರ್ಚೆಗಳು ಚುನಾವಣಾ ಹೋರಾಟಕ್ಕೆ ಮೆರಗು ನೀಡಿತ್ತು. ಫಲಿತಾಂಶ ಬಳಿಕ ಎಡ ಒಕ್ಕೂಟದ ವಿದ್ಯಾರ್ಥಿಗಳು ಜೆಎನ್‌ಯು ಮತ್ತೆ ಕೆಂಪಾಗಿದೆ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

Tags:
error: Content is protected !!