Mysore
30
broken clouds

Social Media

ಬುಧವಾರ, 28 ಜನವರಿ 2026
Light
Dark

ಮಹಿಳಾ ಹಾಸ್ಟೆಲ್ ಸ್ನಾನಗೃಹದಲ್ಲಿ ಕ್ಯಾಮೆರಾ ಅಳವಡಿಕೆ ; ಮಹಿಳೆ ಸೇರಿ ಇಬ್ಬರ ಬಂಧನ

ಕೃಷ್ಣಗಿರಿ : ತಮಿಳುನಾಡಿನ ಹೊಸೂರಿನ ನಾಗಮಂಗಲಂನಲ್ಲಿರುವ ಮಹಿಳಾ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಒಡಿಶಾ ಮೂಲದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ನಾಗಮಂಗಲಂನಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಸೌಲಭ್ಯದ ನೂರಾರು ಮಹಿಳಾ ಉದ್ಯೋಗಿಗಳು ವಿಡಿಯಾಲ್ ರೆಸಿಡೆನ್ಸಿ ಎಂಬ ಕಂಪೆನಿಯ ಹಾಸ್ಟೆಲ್‌ನ ಸ್ನಾನಗೃಹದೊಳಗೆ ಗುಪ್ತ ಕ್ಯಾಮೆರಾ ಪತ್ತೆಯಾದ ನಂತರ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ:-ಬಿಹಾರ ಚುನಾವಣೆ : ಮೊದಲ ಹಂತದಲ್ಲಿ ಶೇ.60ರಷ್ಟು ಮತದಾನ

೧೧ನೇ ಮಹಡಿಯ ರಚನೆಯು ಎಂಟು ಬ್ಲಾಕ್‌ಗಳನ್ನು ಹೊಂದಿದ್ದು, ೬,೦೦೦ಕ್ಕೂ ಹೆಚ್ಚು ಮಹಿಳೆಯರಿಗೆ ವಸತಿ ಒದಗಿಸುತ್ತದೆ.

ನಾಗಮಂಗಲಂನಲ್ಲಿರುವ ಕಂಪೆನಿಯ ಸೌಲಭ್ಯದ ಉದ್ಯೋಗಿಯಾಗಿದ್ದ ಒಡಿಶಾದ ೨೨ ವರ್ಷದ ನೀಲುಕುಮಾರಿ ಗುಪ್ತಾ ಹಾಸ್ಟೆಲ್‌ನಲ್ಲಿ ತಂಗಿದ್ದರು. ಅವರು ತಮ್ಮ ಸ್ನೇಹಿತ ಸಂತೋಷ್ (೨೫) ಅವರ ಪ್ರಚೋದನೆಯ ಮೇರೆಗೆ ಈ ಕ್ಯಾಮೆರಾ ಅಳವಡಿಸಿದ್ದರು ಎನ್ನಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಪಿ.ತಂಗದುರೈ ಅವರ ಪ್ರಕಾರ, ಸಂತೋಷ್ ಅವರನ್ನು ನವೆಂಬರ್ ೫ ರಂದು ಬೆಂಗಳೂರಿನಿಂದ ಉದನಪಲ್ಲಿಯಿಂದ ಪೊಲೀಸ್ ತಂಡ ಬಂಧಿಸಿತು.

Tags:
error: Content is protected !!