ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ತೀವ್ರವಾಗಿ ಕುಸಿದಿದೆ.
ದೆಹಲಿ-ಎನ್‌ಸಿಆರ್‌ನ ಹಲವಾರು ಭಾಗಗಳಲ್ಲಿ ಮಾಲಿನ್ಯದ ಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. ದಟ್ಟವಾದ ಹೊಗೆಯಿಂದಾಗಿ ದೆಹಲಿಯ ಪ್ರದೇಶದಾದ್ಯಂತ ಗೋಚರತೆಯನ್ನು ಕಡಿಮೆ ಮಾಡಿದೆ. ಜೊತೆಗೆ ಉಸಿರಾಟದ ಸ್ಥಿತಿಯನ್ನು ಹದಗೆಡಿಸಿದೆ.
ನಗರದ ಹಲವಾರು ಭಾಗಗಳಲ್ಲಿ ಮಾಲಿನ್ಯದ ಮತ್ತಷ್ಟು ಹದಗೆಟ್ಟಿದ್ದು, ಅಲ್ಲಿ ವಾಯು ಗುಣಮಟ್ಟ ಸೂಚ್ಯಂಕ 400 ಅಂಕವನ್ನು ದಾಟಿದ್ದು, ಇದು ವಿಷಕಾರಿ ಗಾಳಿಯ ಗಂಭೀರತೆಯನ್ನು ಸೂಚಿಸುತ್ತದೆ.
ಇದನ್ನು ಓದಿ: ದೆಹಲಿಯಲ್ಲಿ ಧಾರಾಕಾರ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ
ಅತ್ಯಂತ ಕಲುಷಿತ ಪ್ರದೇಶಗಳಲ್ಲಿ ವಜೀರ್‌ಪುರ, ಬವಾನಾ, ರೋಹಿಣಿ, ಆರ್.ಕೆ.ಪುರ, ದ್ವಾರಕಾ ಸೇರಿದ್ದು, ಇವೆಲ್ಲವೂ ಅಪಾಯಕಾರಿ ಮಟ್ಟದ ಮಾಲಿನ್ಯವನ್ನು ದಾಖಲಿಸಿವೆ.
ಮಂಜು ಹಾಗೂ ಹೊಗೆಯ ಮಿಶ್ರಣದಿಂದಾಗಿ ವಾಯು ಗುಣಮಟ್ಟ ಸಂಪೂರ್ಣ ಹದಗೆಟ್ಟಿದ್ದು, ಬಲವಾದ ವಾಯುವ್ಯ ಗಾಳಿ ಅಥವಾ ಮಳೆ ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಗಾಳಿಯ ಗುಣಮಟ್ಟ ಹದಗೆಡುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.





