Mysore
28
scattered clouds

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಹುಣಸೂರು | ನಾಪತ್ತೆಯಾಗಿದ್ದ ವಕೀಲ ಶವವಾಗಿ ಪತ್ತೆ

ಹುಣಸೂರು : ನಾಪತ್ತೆಯಾಗಿದ್ದ ಹುಣಸೂರಿನ ಖ್ಯಾತ ವಕೀಲ ಶವವಾಗಿ ಪತ್ತೆ‌ಯಾಗಿದ್ದಾರೆ. ನಗರದ ಗೋಕುಲ ಬಡಾವಣೆ ನಿವಾಸಿ ವಕೀಲ ಕೆ.ರಾಜು (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಶವ ಪತ್ತೆಯಾಗಿದೆ.

ಘಟನೆ ವಿವರ :
ನಿನ್ನೆ ಆಫೀಸ್‌ಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದ ವಕೀಲ. ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಹುಡುಕಾಟ ನಡೆಸಿ ಬಿಳಿಕೆರೆ ಪೊಲೀಸ್‌ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು.

ಇದನ್ನೂ ಓದಿ:-Wi-Fi ಯೂಸರ್‌ ನೇಮ್‌ನಲ್ಲಿ ಪಾಕ್ ಜಿಂದಾಬಾದ್ : ಕ್ರಮಕ್ಕೆ ಸ್ಥಳೀಯರ ಆಗ್ರಹ

ಈ ನಡುವೆ ಗುರುವಾರ ಹುಣಸೂರು ತಾಲ್ಲೂಕಿನ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ವಕೀಲನ ಕಾರು ಪತ್ತೆಯಾಗಿತ್ತು. ನದಿ ಬಳಿ ಕಾರು ಪತ್ತೆಯಾದ ಹಿನ್ನಲೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿತ್ತು.
ಬೆಳಗಿನಿಂದ ಹೊಸರಾಮನಹಳ್ಳಿಯ ಲಕ್ಷ್ಮಣ ತೀರ್ಥ ನದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಇದೀಗ ನದಿಯಲ್ಲಿ ವಕೀಲ ಕೆ.ರಾಜು ಶವವಾಗಿ ಪತ್ತೆಯಾಗಿದ್ದಾರೆ.

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Tags:
error: Content is protected !!