ಬೆಂಗಳೂರು : ಆನೇಕಲ್ ತಾಲ್ಲೂಕಿನ ಜಿಗಣಿಯ ಸಮೀಪದ ಗ್ರಾಮವೊಂದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ವೈಫೈ ಯೂಸರ್ ಐಡಿ (ಎಸ್‌ಎಸ್‌ಐಡಿ) ಪತ್ತೆಯಾಗುವ ಮೂಲಕ ಆಘಾತ ಮೂಡಿಸಿದೆ.
ಜಿಗಣಿಯ ಬಳಿ ಕಲ್ಲುಬಾಳು ಗ್ರಾಮದಲ್ಲಿ ವೈಫೈ ಸಂಪರ್ಕಗಳನ್ನು ಹುಡುಕಿದಾಗ ಯಾಂತ್ರಿಕವಾಗಿ ಕಂಡು ಬರುವ ಹೆಸರುಗಳಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಹೆಸರಿನ ಸಂಪರ್ಕವೂ ಪತ್ತೆಯಾಗಿದೆ.
ಈ ಯೂಸರ್ ಐಡಿ ಪಾಸ್‌ವರ್ಡ್ ಸಂರಕ್ಷಿತವಾಗಿದ್ದು, ಸಕ್ರಿಯವಾಗಿತ್ತು. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ವೈಫೈ ಸಂಪರ್ಕ ಪಡೆದವರು ಸಹಜವಾಗಿ ತಮಗೆ ಇಷ್ಟವಾಗುವ ಹೆಸರಿನಲ್ಲಿ ಬಳಕೆದಾರರ ಶೀರ್ಷಿಕೆ (ಎಸ್‌ಎಸ್‌ಐಡಿ) ಇಟ್ಟುಕೊಳ್ಳುತ್ತಾರೆ. ಆದರೆ ಕಲ್ಲುಬಾಳು ಗ್ರಾಮದಲ್ಲಿ ಇಂಟರ್‌ನೆಟ್ ಸಂಪರ್ಕ ಪಡೆದ ವ್ಯಕ್ತಿಯೊಬ್ಬರು ತಮ ವೈಫೈಗೆ ಪಾಕಿಸ್ತಾನ್ ಜಿಂದಾಬಾದ್ ಎಂಬ ಸರ್ವೀಸ್ ಸೆಟ್ ಐಡೆಂಟಿಫೈಯರ್ ಶೀರ್ಷಿಕೆ ಇಟ್ಟುಕೊಂಡಿರುವುದು ಅಚ್ಚರಿ ಮೂಡಿಸಿದೆ.





