Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ನಟ ಧ್ರುವಸರ್ಜಾ ವಿರುದ್ಧ ಮತ್ತೊಂದು ದೂರು ದಾಖಲು

Dhruva sarja

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಧ್ರುವಸರ್ಜಾ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಧ್ರುವ ಸರ್ಜಾ ಅವರಿಂದ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿದಿನ ನಮ್ಮ ಮನೆಯ ಮುಂದೆ ಧ್ರುವಸರ್ಜಾ ಅಭಿಮಾನಿಗಳು ಬೈಕ್‌, ಕಾರುಗಳನ್ನು ತಂದು ಪಾರ್ಕ್‌ ಮಾಡುತ್ತಿದ್ದಾರೆ.

ಜೊತೆಗೆ ಗುಂಪುಗೂಡುವುದು, ಮನೆಯ ಗೋಡೆಗಳಿಗೆ ಉಗುಳುವುದನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಧ್ರುವಸರ್ಜಾ ಅಕ್ಕ-ಪಕ್ಕದ ಮನೆಯವರಿಗೆ ತುಂಬಾ ತೊಂದರೆಯಾಗುತ್ತಿದೆ. ಕಿರಿಕಿರಿ ಉಂಟಾಗುತ್ತಿದೆ ಎಂದು ಮನೋಜ್‌ ಎಂಬುವವರು ದೂರು ನೀಡಿದ್ದಾರೆ.

ಮನೋಜ್‌ ದೂರಿನ ಮೇರೆಗೆ ನಟ ಧ್ರುವ ಸರ್ಜಾ, ಅವರ ಮ್ಯಾನೇಜರ್‌, ಕಾರು ಚಾಲಕ ಹಾಗೂ ಫ್ಯಾನ್ಸ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Tags:
error: Content is protected !!