ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಪೊಲೀಸರು ಧರಿಸುವ ಕ್ಯಾಪ್‌ಗಳ ಮಾದರಿಯ ಪೀಕ್ ಕ್ಯಾಪ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಸಾಂಕೇತಿಕವಾಗಿ ರಾಜ್ಯದ ಪೊಲೀಸರಿಗೆ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ೧೯೭೦ರ ದಶಕದವರೆಗೆ ಪೊಲೀಸರು ಖಾಕಿ ಚಡ್ಡಿ ಹಾಗೂ ಉದ್ದನೆಯ ತೋಳಿನ ಖಾಕಿ ಅಂಗಿಗಳನ್ನು ಧರಿಸುತ್ತಿದ್ದರು. ಆನಂತರ ಖಾಕಿ ಪ್ಯಾಂಟ್ ಹಾಗೂ ಅಂಗಿ ಸಮವಸ ಜಾರಿಗೆ ಬಂತು. ಇದೀಗ ಪೊಲೀಸರಿಗೆ ಪೀಕ್ ಕ್ಯಾಪ್ ನೀಡುವ ಮೂಲಕ ಅವರನ್ನು ಮತ್ತಷ್ಟು ಸ್ಮಾರ್ಟ್ ಮಾಡಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.
–ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





