Mysore
27
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ವಿದ್ಯಾರ್ಥಿನಿ ಮೇಲೆ ಹಾಡಹಗಲೇ ಆಸಿಡ್ ದಾಳಿ : ಬೆಚ್ಚಿದ ದಿಲ್ಲಿ ಜನ

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಆಸಿಡ್ ದಾಳಿ ನಡೆದಿದೆ. ಕಾಲೇಜಿನ ಬಳಿ ಮೂವರು ಯುವಕರು 20 ವರ್ಷದ ವಿದ್ಯಾರ್ಥಿನಿ ಮೇಲೆ ಆಸಿಡ್ ಎರಚಿ ಪರಾರಿಯಾಗಿರುವುದು ಇಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ. ಹಾಡಹಗಲೇ ಈ ಘಟನೆ ನಡೆದಿದೆ.

ಜಿತೇಂದರ್ ಎಂಬಾತ ತನ್ನ ಇನ್ನಿಬ್ಬರು ಸ್ನೇಹಿತರಾದ ಇಶಾನ್ ಮತ್ತು ಅರ್ಮಾನ್ ಜತೆ ಲಕ್ಷ್ಮಿಬಾಯಿ ಕಾಲೇಜಿನ ಬಳಿ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಆಕೆಯ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:-ಮುಂದಿನ CJI ಆಗಿ ನ್ಯಾ.ಸೂರ್ಯಕಾಂತ್‌ ನೇಮಕಕ್ಕೆ ಶಿಫಾರಸು ಮಾಡಿದ ಗವಾಯಿ

ಆಕೆ ಮುಖವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಕಾರಣ ಕೈಗಳಿಗೆ ಗಂಭೀರ ಗಾಯಗಳಾಗಿವೆ. ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದ್ದಾರೆ. ಬೈಕ್‌ನಲ್ಲಿ ಬಂದು ಆಸಿಡ್ ಎರಚಿ ಪರಾರಿಯಾದ ಮೂವರು ಆರೋಪಿಗಳನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಿದ್ದಾರೆ.

Tags:
error: Content is protected !!