ಬೆಂಗಳೂರು: ನೋಂದಣಿಯಾಗದ ಆರ್‌ಎಸ್‌ಎಸ್ ಸಂಘಕ್ಕೆ ದೇಣಿಗೆ ಕೊಡುತ್ತಿರುವವರು ಯಾರು ಎಂದು ಮಾಹಿತಿ ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರಿಗೆ ಎಲ್ಲಿಂದ ದೇಣಿಗೆ ಬರುತ್ತಿದೆ? ಹೊರ ರಾಜ್ಯ, ಹೊರ ದೇಶಗಳಿಂದ ದೇಣಿಗೆ ಬರುತ್ತಿದೆಯಾ ಎಂದು ಮಾಹಿತಿ ನೀಡಲಿ. ಒಂದು ದೇವಸ್ಥಾನದ ಹುಂಡಿ ಹಣಕ್ಕೂ ಲೆಕ್ಕ ಇರುತ್ತದೆ. ಹುಂಡಿಗೆ ಎಷ್ಟು ಹಣ ಬಿದ್ದಿದೆ ಎಂದು ಎಣಿಸಿ ಲೆಕ್ಕ ಇಡಲಾಗುತ್ತದೆ. ಅದನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಬಳಸಲಾಗುತ್ತದೆ. ಆದರೆ ಆರ್‌ಎಸ್‌ಎಸ್‌ಗೆ ಕೊಡುವ ದೇಣಿಗೆ ಬಗ್ಗೆ ಯಾವುದೇ ಲಕ್ಕವಿಲ್ಲ. ಹಾಗಾದರೆ ಆರ್‌ಎಸ್‌ಎಸ್ ದೇವಸ್ಥಾನ ಹಾಗೂ ದೇವರಿಗಿಂತ ದೊಡ್ಡದಾ ಎಂದು ಪ್ರಶ್ನೆ ಮಾಡಿದರು.
ಮುಂದುವರಿದು ಮಾತನಾಡಿದ ಅವರು, ಮೊದಲು ಆರ್‌ಎಸ್‌ಎಸ್‌ಗೆ ಬರುವ ದೇಣಿಗೆ ಮೂಲಗಳು ಯಾವುವು? ಯಾವ ಕಾರಣಕ್ಕೆ ದೇಣಿಗೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೊಡಲಿ ಎಂದು ಆಗ್ರಹಿಸಿದರು.





