ನಾಗಮಂಗಲ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ನಾಗಮಂಗಲದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದು ಮ್ಯಾಜಿಕ್‌ನಿಂದ ಹೊರತು ಸ್ವಂತ ಬಲದಿಂದಲ್ಲ ಎಂದು ವ್ಯಂಗ್ಯವಾಡಿದರು. “ಜೆಡಿಎಸ್ ಪಕ್ಷದವರು ಯಾವತ್ತೂ ತಮ್ಮ ಶಕ್ತಿಯಿಂದ ಅಧಿಕಾರಕ್ಕೆ ಬಂದವರಲ್ಲ. ಈಗಲೂ ಅವರು ಹೇಗಾದರೂ ಬಿಜೆಪಿ ಜೊತೆ ಸೇರಿ ಅಧಿಕಾರ ಮಾಡುವ ಕನಸು ಕಾಣುತ್ತಿದ್ದಾರೆ” ಎಂದು ಟೀಕಿಸಿದರು.
ಇದನ್ನು ಓದಿ: ಜೆಡಿಎಸ್ ಅಧಿಕಾರಕ್ಕೆ ಬರುವುದು ಹಗಲು ಗನಸು : ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಮುಂದುವರಿದು ಮಾತನಾಡಿದ ಅವರು, “ಬಿಜೆಪಿ ಜೊತೆ ಸೇರಿ ಈಗ ಜೆಡಿಎಸ್ ಮಂಗಮಾಯ ಆಗ್ತಿದೆ. ಬಿಜೆಪಿಯವರೂ ದಡ್ಡರಲ್ಲ, ಅವರಿಗೂ ನೇರವಾಗಿ ಅಧಿಕಾರಕ್ಕೆ ಬರೋ ಶಕ್ತಿ ಇಲ್ಲ. ಆದರೆ ಮತಗಳ್ಳತನದಲ್ಲಿ ಅವರು ನಿಸ್ಸಿಮರು,” ಎಂದು ವ್ಯಂಗ್ಯವಾಡಿದರು.





