Mysore
24
broken clouds

Social Media

ಶನಿವಾರ, 24 ಜನವರಿ 2026
Light
Dark

ನಾರ್ವೆ ಸಂಸತ್ತಿಗೆ ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಭೇಟಿ

ನಾರ್ವೆ: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರ ನೇತೃತ್ವದಲ್ಲಿ ನಿಯೋಗವೊಂದು ನಾರ್ವೆ ಪಾರ್ಲಿಮೆಂಟ್‌ಗೆ ಅಧಿಕೃತ ಭೇಟಿ ನೀಡಿತು.

1814ರಲ್ಲಿ ಸ್ಥಾಪಿತವಾದ ನಾರ್ವೆ ಸಂಸತ್ತು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಸಂಸತ್ತುಗಳಲ್ಲಿ ಒಂದು ಹಾಗೂ ಅದೇ ವರ್ಷ ಅಂಗೀಕರಿಸಲಾದ ನಾರ್ವೆಯ ಸಂವಿಧಾನವು ಇಂದಿಗೂ ಶಾಶ್ವತ ಪ್ರಜಾಪ್ರಭುತ್ವದ ಮಾದರಿಯಾಗಿ ಉಳಿದಿದೆ. ಈ ಸಂದರ್ಭದಲ್ಲಿ ಅವರು ನಾರ್ವೆಯ ಮಾಜಿ ಸಚಿವರೂ ಹಾಗೂ ಮಾಜಿ ಸಂಸದರೂ ಆಗಿದ್ದ ಹಿಮಾಂಶು ಗುಲೇಟ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು.

ಭೇಟಿಯ ವೇಳೆ, ನಾರ್ವೆಯ ಇತಿಹಾಸ, ಸಂವಿಧಾನ, ಆಡಳಿತ ವ್ಯವಸ್ಥೆ ಹಾಗೂ ಜನಪರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ, ಎರಡೂ ರಾಷ್ಟ್ರಗಳ ಸಂಸತ್ತಿನ ಕಾರ್ಯನಿರ್ವಹಣಾ ವಿಧಾನಗಳು, ಜನತಾಂತ್ರಿಕ ಪ್ರಕ್ರಿಯೆಗಳ ವಿನ್ಯಾಸ ಹಾಗೂ ಸಂಸದೀಯ ಅಧಿವೇಶನಗಳ ನಿರ್ವಹಣೆ ಕುರಿತಂತೆ ಪರಸ್ಪರ ಅಭಿಪ್ರಾಯ ವಿನಿಮಯವೂ ನಡೆಯಿತು.

ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ನಾರ್ವೆಯ ಪ್ರಗತಿಶೀಲ ಜನತಾಂತ್ರಿಕ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕರ್ನಾಟಕ ಮತ್ತು ನಾರ್ವೆ ದೇಶದ ನಡುವೆ ಶಿಕ್ಷಣ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಹಕಾರ ವೃದ್ಧಿಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

Tags:
error: Content is protected !!