Mysore
28
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಹುಲಿ ದಾಳಿ ; ಎರಡು ಹಸುಗಳು ಬಲಿ

ಗುಂಡ್ಲುಪೇಟೆ : ತಾಲ್ಲೂಕಿನ ಅಗತಗೌಡನಹಳ್ಳಿ ಗ್ರಾಮದ ನಾಗಪ್ಪ ಎಂಬವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿರುವ ಘಟನೆ ನಡೆದಿದೆ.

ಮತ್ತೊಂದು ಕಡೆ ಗ್ರಾಮದ ದೇಶಿಪುರ ಕಾಲೋನಿಯಲ್ಲಿ ಚಿನ್ನಮ್ಮ ಎಂಬವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದೆ. ಭಾನುವಾರವಷ್ಟೆ ಇಂಗಲವಾಡಿ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿತ್ತು. ಸೋಮವಾರ ಬೆಳಿಗ್ಗೆ ಪ್ರತ್ಯೇಕ ಎರಡು ಕಡೆಗಳಲ್ಲಿ ಹುಲಿ ದಾಳಿಗೆ ೨ ಹಸುಗಳು ಸಾವಿಗೀಡಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಹುಲಿ ದಾಳಿಗೆ ಹಸು ಬಲಿ ; ರೈತರ ಪ್ರತಿಭಟನೆ

ಈಗಾಗಲೇ ಅಗತಗೌಡನಹಳ್ಳಿ ಬಳಿ ಹಸು ಕೊಂದಿದ್ದ ಸುತ್ತಮುತ್ತ ಸಾಕಾನೆಯ ಮೂಲಕ ಕೂಂಬಿಂಗ್ ಆರಂಭಿಸಿದ್ದು, ಸಾಕಾನೆ ನೋಡಲು ಜನ ಜಮಾಯಿಸಿದ್ದರಿಂದ ಕಿರಿಕಿರಿಯಾಯಿತು. ಜೊತೆಗೆ ಆನೆಯ ಹಿಂದೆ ಜನ ಹೋದರೆ ಹುಲಿ ಜನರ ಮೇಲೆ ಬೀಳುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರು ಸಹಕರಿಸಬೇಕೆಂದು ಅಽಕಾರಿಗಳು ಮನವಿ ಮಾಡಿದರು.

ಹಸು ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:
error: Content is protected !!