Mysore
29
scattered clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಗೂಡ್ಸ್ ಆಟೋ ಪಲ್ಟಿ | 15 ಕಾರ್ಮಿಕರು ಗಂಭೀರ

ಸರಗೂರು : ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ ಪಲ್ಟಿ ಹೊಡೆದು ಮೂವರು ಗಂಭೀರ ಗಾಯಗೊಂಡಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಹುಣಸೂರು-ಎನ್.ಬೇಗೂರು ರಸ್ತೆಯಲ್ಲಿ ಕಬಿನಿ ಬಲದಂಡೆ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂತಗಾಲದಹುಂಡಿ ಗ್ರಾಮದ ಹರ್ಷಿತಾ, ಮಂಜುಳಾ, ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಪುಟ್ಟಿ, ಪುಟ್ಟಮ್ಮ, ಭಾಗ್ಯ, ಜೌಡಮ್ಮ, ಶ್ರುತಿ, ಮಹದೇವಮ್ಮ, ನಾಗಮ್ಮ, ಕಾಳಮ್ಮ, ಅಶ್ವಿನಿ, ವಾದಮ್ಮ, ಸಿದ್ದಶಟ್ಟಿ, ವಾದಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:-ಸಿಜೆಐ ಮೇಲೆ ದಾಳಿ : ವಕೀಲ ರಾಕೇಶ್‌ ಕಿಶೋರ್‌ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ʻಎಜಿʼ ಒಪ್ಪಿಗೆ

ಶುಂಠಿ ಕಾರ್ಮಿಕರು:
ಗೊಂತಗಾಲದಹುಂಡಿ ಗ್ರಾಮದಿಂದ ೧೫ಕ್ಕೂ ಹೆಚ್ಚು ಮಹಿಳೆಯ ಶುಂಠಿ ಕೆಲಸಕ್ಕೆಂದು ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದಾಗ ಚಾಲಕನ ಅಜಾರೂಕತೆಯಿಂದಾಗಿ ಗೂಡ್ಸ್ ಆಟೋ ಕಬಿನಿ ಬಲದಂಡೆ ಸಮೀಪದಲ್ಲಿ ಪಲ್ಟಿ ಹೊಡೆದಿದ್ದು, ಆಟೋದಲ್ಲಿದ್ದ ಎಲ್ಲರೂ ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಪ್ರಾಂಣಿಕರು ಆಟೋದ ಕೆಳಗಡೆ ಸಿಲುಕಿಕೊಂಡಿದ್ದವರನ್ನು ರಕ್ಷಣೆ ವಾಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

ಒಂದೂವರೆ ತಾಸು ಬಾರದ ಅಂಬ್ಯುಲೆನ್ಸ್:
ಗುರುವಾರ ಬೆಳಿಗ್ಗೆ ೭.೩೦ಕ್ಕೆ ಘಟನೆ ನಡೆದರೂ ೯ ಗಂಟೆಯಾದರೂ ಆಂಬ್ಯುಲೆನ್ಸ್ ಸ್ಥಳಕ್ಕಾಗಮಿಸಲಿಲ್ಲ. ಎಷ್ಟೆ ಕರೆ ವಾಡಿದರೂ ಸಬೂಬು ಹೇಳುವುದೇ ಆಯಿತು. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ತಾಲ್ಲೂಕು ಆಡಳಿತ, ಶಾಸಕರ ವಿರುದ್ಧ ಕಿಡಿಕಾರಿದರು. ಇದಲ್ಲದೆ ಕೂಡಲೇ ಸರಗೂರಿಗೆ ಸರ್ಕಾರ ಆಂಬ್ಯುಲೆನ್ಸ್ ಸೇವೆ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಘಟನೆ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:
error: Content is protected !!