ಮೈಸೂರು: ಕಾಂತಾರ ಚಾಪ್ಟರ್.1 ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆಯ ದರ್ಶನ ಪಡೆದರು.
ನಾಡದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ ಅವರು, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇದನ್ನು ಓದಿ: ಹಾಸನಾಂಬೆ ದರ್ಶನ ಪಡೆದ ಬಾನು ಮುಷ್ತಾಕ್
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವೂ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶದಾದ್ಯಂತ ತುಂಬಾ ಅದ್ಬುತವಾದ ಯಶಸ್ಸನ್ನು ಕೊಟ್ಟಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು. ಅದೇ ರೀತಿ ಈ ಬಾರಿಯೂ ಇನ್ನೊಂದು ಚಾಪ್ಟರ್ ಜನರಿಗೆ ತಲುಪಿರುವ ರೀತಿ ಹಾಗೂ ಅವರು ಒಪ್ಪಿಕೊಂಡಿರುವ ರೀತಿ ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.
ಇನ್ನು ರಿಷಬ್ ಶೆಟ್ಟಿ ಅವರು ದಕ್ಷಿಣ ಕಾಶಿ ನಂಜನಗೂಡಿಗೆ ಭೇಟಿ ನೀಡಿ ನಂಜುಂಡೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದು, ಸಂಜೆ 4 ಗಂಟೆಗೆ ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.





