Mysore
28
scattered clouds

Social Media

ಶುಕ್ರವಾರ, 23 ಜನವರಿ 2026
Light
Dark

ಅಮಿತಾಬ್ ಬಚ್ಚನ್‍ ಎದುರು ಹಾಟ್‍ ಸೀಟ್‍ನಲ್ಲಿ ರಿಷಭ್‍ ಶೆಟ್ಟಿ

ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಚಾಪ್ಟರ್ 1’ ಚಿತ್ರದ ಮೊದಲ ವಾರ 509.25 ಕೋಟಿ ರೂ. ಗಳಿಕೆ ಮಾಡಿತ್ತು ಎಂದು ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲಂಸ್‍ ಸಂಸ್ಥೆಯೇ ಅಧಿಕೃತವಾಗಿ ಘೋಷಿಸಿತ್ತು. ಅದಾಗಿ ನಾಲ್ಕು ದಿನಗಳಲ್ಲಿ ಚಿತ್ರವು ಜಾಗತಿಕವಾಗಿ ಇನ್ನೂ 100 ಕೋಟಿ ರೂ. ಅಧಿಕ ಗಳಿಸಿತ್ತು, ಒಟ್ಟಾರೆ ಚಿತ್ರವು 600 ಕೋಟಿ ರೂ. ಗಳಿಕೆ ಮಾಡಿದೆ.

ಇನ್ನು, ರಿಷಭ್‍ ಶೆಟ್ಟಿ ಮತ್ತು ಚಿತ್ರತಂಡದವರು ದೆಹಲಿ, ಮುಂಬೈ, ಪೂಣೆ ಮುಂತಾದ ನಗರಗಳಿಗೆ ಭೇಟಿ ನೀಡಿ, ಚಿತ್ರವನ್ನು ಸತತವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ, ಮುಂಬೈನಲ್ಲಿ ಬಾಲಿವುಡ್‍ ಸೆಲೆಬ್ರಿಟಿಗಳಿಗೆಂದೇ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಲಾಗಿತ್ತು ಮತ್ತು ಇದರಲ್ಲಿ ಸುನೀಲ್‍ ಶೆಟ್ಟಿ, ಗುಲ್ಶನ್‍ ಗ್ರೋವರ್, ಕುಬ್ರಾ ಸೇಠ್‍ ಸೇರಿದಂತೆ ಹಲವರು ಹಾಜರಿದ್ದರು.

ಇದನ್ನು ಓದಿ : ನಿಂತೇ ಹೋಯ್ತಾ ಯುವ, ‘ದುನಿಯಾ’ ಸೂರಿ ಹೊಸ ಸಿನಿಮಾ?

ಇನ್ನು, ರಿಷಭ್‍ ಶೆಟ್ಟಿ, ಪ್ರಗತಿ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‍ ಮುಂತಾದವರು ಹಲವು ರಾಷ್ಟ್ರೀಯ ವಾಹಿನಿಗಳಿಗೆ ಭೇಟಿ ನೀಡಿ, ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದರ ಜೊತೆಗೆ ಅಮಿತಾಭ್‍ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗ ಕರೋಡ್ಪತಿ’ ಸೀಸನ್ 17ರ ಅತಿಥಿಯಾಗಿ ರಿಷಭ್ ಕಾಣಿಸಿಕೊಂಡಿದ್ದಾರೆ. ಅಮಿತಾಭ್‍ ಬಚ್ಚನ್‍ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದೇ ಸಂದರ್ಭದಲ್ಲಿ ರಿಷಭ್‍ ಸಹ ‘ಕೌನ್‍ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸುವದುರ ಜೊತೆಗೆ, ಅಮಿತಾಭ್‍ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ರಿಷಭ್ ಭಾಗವಹಿಸಿರುವ ಫೋಟೋಗಳು ಸೋಷಿಯಲ್‍ ಮೀಡಿಯಾದಲ್ಲಿ ವೈರಲ್‍ ಆಗಿದೆ.

‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್‍ ನಿರ್ಮಿಸಿದ್ದು, ರಿಷಭ್‍ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್‍, ಅಚ್ಯುತ್‍ ಕುಮಾರ್‍, ಗುಲ್ಶನ್‍ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.

Tags:
error: Content is protected !!