ಮೈಸೂರು : ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳು ವತಿಯಿಂದ ಭಾನುವಾರ ಸೆಲೆಬ್ರೇಷನ್ ಮೈಸೂರು ಹಾಫ್ ಮ್ಯಾರಥಾನ್ ಹಾಗೂ ೧೦ಕೆ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದವು. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮ್ಯಾರಥಾನ್ ದೈಹಿಕ ಶಕ್ತಿಗೆ ಮಾತ್ರವಲ್ಲ, ಮಾನಸಿಕ ವ್ಯಕ್ತಿತ್ವ ವಿಕಸಕ್ಕೂ ಪ್ರೇರಣೆಯಾಗಿದೆ ಎಂದರು. ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ನಮ್ಮ ಮೈಸೂರಿನ ಆಯುರ್ವೇದ ಮಹತ್ವದ ಕೊಡುಗೆಯನ್ನು ನೀಡಿದೆ. ಈಗ ಯೋಗ ವಿಶ್ವಮಟ್ಟದಲ್ಲಿಯೂ ಮನ್ನಣೆ ಪಡೆದುಕೊಂಡಿದೆ. ಇದು ಆರೋಗ್ಯ ವೃದ್ಧಿಸುವ ಮತ್ತೊಂದು ಕ್ರಮವಾಗಿದೆ ಎಂದರು.
ಇದನ್ನುಓದಿ: ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಮ್ಯಾರಾಥಾನ್: ಜಿ.ಪರಮೇಶ್ವರ್
ಯುವಕರು ಈಗ ಮ್ಯಾರಥಾನ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದನ್ನು ನೋಡಿ ಖುಷಿಯಾಯಿತು ಎಂದು ಯದುವೀರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ದೇಶಾದ್ಯಂತ ನಡೆಯುವ ಫಿಟ್ ಇಂಡಿಯಾ ಆಂದೋಲನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಆಗ ನಮ್ಮ ನಾಡು, ದೇಶ ಕೂಡ ಆರೋಗ್ಯವಂತವಾಗಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ರೀತಿಯ ಆರೋಗ್ಯ ಪೂರಕ ಯೋಜನೆಗಳನ್ನು ಎಲ್ಲರೂ ಕೈಗೊಳ್ಳೋಣ, ಎಲ್ಲರೂ ಆರೋಗ್ಯ ಸಿರಿ ಪಡೆಯೋಣ ಎಂದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ೧/೨ ಮ್ಯಾರಥಾನ್ ಹಾಗೂ ೧೦ಕೆ ಓಟ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಯಾವುದೇ ತೊಂದರೆ ಆಗದಂತೆ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಓಟದ ವೇಳೆ ಮಾರ್ಗಗಳ ಸಂಚಾರವನ್ನು ಬದಲಿಸಲಾಗಿತ್ತು.
ಹೆಜ್ಜೆಹಾಕಿದ ಯದುವೀರ್:
ಸೆಲೆಬ್ರೇಷನ್ ಮೈಸೂರು ಹಾಫ್ ಮ್ಯಾರಥಾನ್ ಹಾಗೂ ೧೦ಕೆ ಓಟದ ಸ್ಪರ್ಧೆಗೆ ಚಾಲನೆ ನೀಡಿದ ಯದುವೀರ್ ಅವರು, ಸ್ವತಃ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಸ್ಪಽಗಳಲ್ಲಿ ಗೆ ಉತ್ಸಾಹ ತುಂಬಿದರು. ಅಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಮಯೋಮಾನದವರ ಜೊತೆ ತಾವು ಕೂಡ ೧೦ ಕಿ.ಮೀ. ದೂರ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.





