Mysore
35
overcast clouds

Social Media

ಭಾನುವಾರ, 03 ಮೇ 2026
Light
Dark

ಡಿಸಿಎಂ ಡಿಕೆಶಿ ಬೆಂಗಳೂರು ನಡಿಗೆಯಲ್ಲಿ ಹೈಡ್ರಾಮಾ: ಶಾಸಕ ಮುನಿರತ್ನ ಪ್ರತಿಭಟನೆ

Hydrarama during DCM DKSH's Bengaluru walk: MLA Munirathna protests

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದ್ದು, ಮತ್ತಿಕೆರೆಯ ಜೆ.ಪಿ.ಪಾರ್ಕ್‌ನಲ್ಲಿ ಶಾಸಕ ಮುನಿರತ್ನ ಪ್ರತಿಭಟನೆ ನಡೆಸಿದರು.

ಸ್ಥಳೀಯ ಶಾಸಕನಾದ ನನಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ನನ್ನ ಮೇಲೆ ಸಚಿವರು ಕೈ ಎತ್ತಿ ಹೊಡೆಯುವ ಯತ್ನ ನಡೆದಿದೆ. ಸ್ಥಳೀಯ ಶಾಸಕನಾದ ನನ್ನನ್ನು ಕರೆದಿಲ್ಲ. ವೇದಿಕೆಗೆ ಹೋಗಲು ಹೋದಾಗ ಪೊಲೀಸರು ನನ್ನನ್ನು ತಡೆದರು. ನನ್ನ ಮೇಲೆ ಹಲ್ಲೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನು ಓದಿ : ಶೂ ಎಸೆದ ಘಟನೆ ಭವಿಷ್ಯದ ಆತಂಕಕಾರಿ ಬೆಳವಣಿಗೆ 

ನನ್ನನ್ನು ಹೊಡೆಯಲು ಕನಕಪುರ, ಚನ್ನಪಟ್ಟಣದಿಂದ ಜನರನ್ನು ಕರೆತಂದಿದ್ದಾರೆ. ನನ್ನ ಮೇಲೆ ರೌಡಿಸಂ ನಡೆಸುತ್ತಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವೋ ಕಾಂಗ್ರೆಸ್‌ ಕಾರ್ಯಕ್ರಮವೋ ಎಂದು ಪ್ರಶ್ನೆ ಮಾಡಿದರು.

ಸೋತ ಅಭ್ಯರ್ಥಿಯನ್ನು ಕೂರಿಸಿಕೊಂಡು ಕಾರ್ಯಕ್ರಮ ಮಾಡಿದ್ದಾರೆ. ಸಂಸದರನ್ನು ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ದೂರಿದರು.

Tags:
error: Content is protected !!