ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಕೆಲ ದಿನಗಳಲ್ಲಿ ಮುಂಗಾರು ಮುಗಿದು, ಹಿಂಗಾರು ಮಳೆ ಆರಂಭವಾಗಲಿದ್ದು, ಈ ವರ್ಷಾಂತ್ಯದವರೆಗೂ ಜನರಿಗೆ ಮಳೆಕಾಟ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
2025ನೇ ಸಾಲಿನ ನೈಋತ್ಯ ಮುಂಗಾರು ಕೆಲ ದಿನಗಳಲ್ಲಿ ಮುಕ್ತಾಯವಾಗಲಿದ್ದು, ಹಿಂಗಾರು ಮಳೆ ಆರಂಭಗೊಳ್ಳುತ್ತಿದೆ. ಈ ಮುಂಗಾರು ಮಳೆ ಜೂನ್.1ರಿಂದ ಸೆಪ್ಟೆಂಬರ್.30ರವರೆಗೂ ದಾಖಲೆಗಳ ಪ್ರಕಾರವಿತ್ತು.
ಇದನ್ನು ಓದಿ : ಸತತ ಮಳೆಗೆ ಕುಸಿದ ಶಾಲಾ ಕಟ್ಟಡದ ಗೋಡೆ
ಇದುವರೆಗೂ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗಿದೆ. ಈ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ 339 ಸೆಂಟಿ ಮೀಟರ್ ಮುಂಗಾರು ಮಳೆಯಾಗಿದ್ದು, ಸರಾಸರಿಗಿಂತ 14 ಸೆಂಟಿ ಮೀಟರ್ ಹೆಚ್ಚಿನ ಮಳೆಯಾಗಿದೆ.
ಇನ್ನು ಈ ವರ್ಷ ಮುಂಗಾರಿನಂತೆ ಹಿಂಗಾರು ಮಳೆಯೂ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ವ್ಯಾಪಕ ಮಳೆಯಾಗಲಿದ್ದು, ಜನರಿಗೆ ಮಳೆ ಕಾಟ ತಪ್ಪಿದ್ದಲ್ಲ ಎಂದು ಹವಾಮಾನ ಇಲಾಖೆ ವಿಜ್ಞಾನಿಗಳು ಸೂಚನೆ ನೀಡಿದ್ದಾರೆ.





