Mysore
26
few clouds

Social Media

ಮಂಗಳವಾರ, 27 ಜನವರಿ 2026
Light
Dark

ಮೈಸೂರು ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Maharshi Valmiki Jayanti celebration held at Mysore University.

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಭಾಂಗಣ ಕ್ರಾಫರ್ಡ್‌ ಭವನದಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಯಿತು.

ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌ ಅವರು, ವಾಲ್ಮೀಕಿ ರಾಮಾಯಣ ಕೃತಿಯು ಅಂದಿನ ಕಾಲದಲ್ಲೇ ವೈಜ್ಞಾನಿಕ ಪ್ರಬುದ್ಧತೆ ಸಾಧಿಸಿದೆ. ಪುಷ್ಪಕ ವಿಮಾನದ ತಂತ್ರಜ್ಞಾನ ಅಂದೇ ಇದ್ದದ್ದನ್ನು ವಾಲ್ಮೀಕಿ ದಾಖಲಿಸುತ್ತಾರೆ. ಯುವ ಜನಾಂಗ ರಾಮಾಯಣವನ್ನು ಓದಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವೆ ಸವಿತಾ ಎಂ.ಕೆ, ಪ್ರೊ ಎಸ್.ಕೆ.ಲೋಲಾಕ್ಷಿ ಸೇರಿದಂತೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಪ್ರಾಧ್ಯಾಪಕೇತರರು ಮತ್ತು ಸಂಶೋಧಕರು ಉಪಸ್ಥಿತರಿದ್ದರು.

Tags:
error: Content is protected !!