Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ಮಕ್ಕಳಿಗೆ ಕೋಲ್ಡ್ರಿಪ್ ಸಿರಪ್‌ ಶಿಫಾರಸು ಮಾಡಿದ್ದ ವೈದ್ಯನ ಬಂಧನ

ಭೋಪಾಲ್: ಮಧ್ಯಪ್ರವೇಶದ ಛಿಂದ್ವಾರಾದಲ್ಲಿ ಮಕ್ಕಳಿಗೆ ಕೋಲ್ಡ್ರಿಪ್ ಸಿರಪ್‌ ಶಿಫಾರಸು ಮಾಡಿದ್ದ ವೈದ್ಯನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಕೆಮ್ಮಿನ ಸಿರಪ್‌ ಸೇವಿಸಿದ್ದ 12 ಮಕ್ಕಳು ಸಾವನ್ನಪ್ಪಿರುವ ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಹೆಚ್ಚಿನ ಮಕ್ಕಳಿಗೆ ಮಕ್ಕಳ ತಜ್ಞ ಡಾ.ಪ್ರವೀಣ್‌ ಸೋನಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ :-ಸಾಲಿಗ್ರಾಮ| ತಾಲ್ಲೂಕು ಆಡಳಿತದ ವಿರುದ್ಧ ನಾಗರಿಕರ ಆಕ್ರೋಶ: ಕಾರಣ ಇಷ್ಟೇ

ಮಧ್ಯಪ್ರದೇಶ ಸರ್ಕಾರ ಕೋಲ್ಡ್ರಿಪ್‌ ಸಿರಪ್‌ ತಯಾರಿಸಿದ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ಶ್ರೀಸನ್‌ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಮಕ್ಕಳಿಗೆ ಕೋಲ್ಡ್ರಿಪ್‌ ಸಿರಪ್‌ ಶಿಫಾರಸು ಮಾಡಿದ್ದ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.

Tags:
error: Content is protected !!