ಸಾಲಿಗ್ರಾಮ: ಸಾಲಿಗ್ರಾಮ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯನ್ನು ಹೊಡೆದು ರಸ್ತೆ ಮಾಡಿಕೊಂಡು ಟ್ರಾಕ್ಟರ್ ಮೂಲಕ ಮಣ್ಣು ಸಾಗಾಣಿಕೆ ಮಾಡಿ ಮನೆ ನಿರ್ಮಾಣ ಮಾಡಿದ್ದರೂ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಸಾಲಿಗ್ರಾಮ ನಾಗರಿಕರು ಗಂಭೀರ ಆರೋಪ ಮಾಡಿದ್ದಾರೆ.
ಸಾಲಿಗ್ರಾಮ ಪಟ್ಟಣದ ಸಾಹುಕಾರ್ ಬೋರಣ್ಣನವರು ಅಂದು ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲು ಜಾಗವನ್ನು ದಾನವಾಗಿ ನೀಡಿದ್ದರು. ಇದು ಸರ್ಕಾರದ ಜಮೀನಲ್ಲ. ನಮ್ಮೂರಿನ ಸಾಹುಕಾರ್ ನೀಡಿದ್ದು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದ ಮೇಲೆ ಶಾಲೆಯನ್ನು ಮುಚ್ಚಲಾಗಿದೆ. ಆದರೀಗ ಶಾಲೆಯ ಗೋಡೆಗಳನ್ನು ಹೊಡೆದು ಹಾಕಿ, ಮಣ್ಣು ಸಾಗಾಟ ಮಾಡಲಾಗಿದೆ.
ಇದನ್ನೂ ಓದಿ:-ಹಿರಿಯ ಸಾಹಿತಿ ಮೊಗಳ್ಳಿ ಗಣೇಶ್ ನಿಧನ
ಈ ಹಿನ್ನೆಲೆಯಲ್ಲಿ ಶಾಲೆಯ ಗೋಡೆ ಹೊಡೆದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಈ ಪ್ರಕರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಸಡ್ಡೆ ತೋರಿದೆ. ಶಾಲೆಯ ಕಟ್ಟಡ ಉಳಿಸುವ ಕಾರ್ಯವಾಗಬೇಕು. ನಮ್ಮ ಹಿರಿಯರು ಓದಿದ ಶಾಲಾ ಕಟ್ಟಡಗಳು ಸಹ ಇವೆ. ಅವುಗಳನ್ನು ರಕ್ಷಣೆ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.





