ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ ಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಪಾಕಿಸ್ತಾನ ನೀಡಿದ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಕೇವಲ ೨೦ ರನ್‌ಗಳಿಗೆ ಮೂರು ಪ್ರಮುಖ (ಅಭಿಷೇಕ್ ಶರ್ಮ, ಶುಭ್ಮನ್ ಗಿಲ್ ಹಾಗೂ ನಾಯಕ ಸೂರ್ಯ ಕುಮಾರ್ ಯಾದವ್) ವಿಕೆಟ್‌ಗಳನ್ನು ಕಳೆದುಕೊಂಡಾಗ ಕ್ರಿಕೆಟ್ ಪಂಡಿತರು ಭಾರತ ಸೋಲುತ್ತದೆ ಎಂದೇ ಭಾವಿಸಿದ್ದರು. ಆದರೆ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಒತ್ತಡದಲ್ಲಿದ್ದರೂ ಎದೆಗುಂದದೆ ಸಮಯೋಚಿತ ಆಟವಾಡಿ ಭಾರತದ ಗೆಲುವಿನ ರೂವಾರಿಗಳಾದರು. ಇದರಿಂದಾಗಿ ಭಾರತ ತಂಡದ ಆಟಗಾರರು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಉತ್ತಮ ಆಟವಾಡಿ ಗೆಲುವನ್ನು ತಂದುಕೊಡುವ ಸಾಮರ್ಥ್ಯ ಇದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದೇ ರೀತಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲೂ ಭಾರತದ ವನಿತೆಯರು ಜಯಭೇರಿ ಬಾರಿಸಲಿ ಎಂಬುದೇ ಕ್ರಿಕೆಟ್ ಅಭಿಮಾನಿಗಳ ಆಶಯ.
– ಜಿ.ಪಿ.ಹರೀಶ್, ವಿ.ವಿ.ಮೊಹಲ್ಲಾ, ಮೈಸೂರು




