Mysore
19
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಮೈಸೂರು ದಸರಾ: ನಾಳೆ ಕಾಡಿನತ್ತ ದಸರಾ ಗಜಪಡೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಕ್ಯಾಪ್ಟನ್‌ ಅಭಿಮನ್ಯು ಅಂಡ್‌ ಟೀಂ ನಾಳೆ ಕಾಡಿನತ್ತ ಪಯಣ ಬೆಳೆಸಲಿವೆ.

ಮೈಸೂರು ಅರಮನೆ ಆವರಣದಲ್ಲಿ ನಾಳೆ ಅರಣ್ಯ ಇಲಾಖೆ ವತಿಯಿಂದ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪೂಜೆ ಮುಗಿದ ಬಳಿಕ ಗಜಪಡೆಯ ಎಲ್ಲಾ ಆನೆಗಳು ಲಾರಿಗಳನ್ನೇರಿ ತಮ್ಮ ತಮ್ಮ ಆನೆ ಶಿಬಿರಗಳತ್ತ ಮರಳಲಿವೆ.

ಇದನ್ನೂ ಓದಿ:-ಕಾಂತಾರ ಸಿನಿಮಾ ತೋರಿಸಲು ಇಡೀ ಥಿಯೇಟರ್‌ ಬುಕ್‌ ಮಾಡಿದ ಪ್ರತಾಪ್‌ ಸಿಂಹ: ಯಾರ್ಯಾರಿಗೆ ಅವಕಾಶ ಗೊತ್ತಾ?

ದಸರಾ ಗಜಪಡೆ ಜೊತೆಗೆ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬ ಸದಸ್ಯರು ಕೂಡ ಕಾಡಿನತ್ತ ಪಯಣಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಳೆದ ಎರಡು ತಿಂಗಳಿನಿಂದಲೂ ಮೈಸೂರಿನಲ್ಲಿ ಬೀಡುಬಿಟ್ಟಿದ್ದ ದಸರಾ ಗಜಪಡೆಗೆ ಈ ಬಾರಿಯ ದಸರಾವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟಿವೆ. ನಾಳಿನ ಕಾರ್ಯಕ್ರಮ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

Tags:
error: Content is protected !!