Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಅಕ್ರಮವಾಗಿ ಸಂಗ್ರಹಿಸಿದ್ದ ರಸಗೊಬ್ಬರ ಜಪ್ತಿ

ಮಂಡ್ಯ : ನಗರದ ಶುಗರ್ ಟೌನ್‌ನಲ್ಲಿರುವ ರಸಗೊಬ್ಬರ ಗೋದಾಮಿನಲ್ಲಿ ಗುಜರಾತ್ ರಾಜ್ಯದ ವಡೋದರ ಜಿಲ್ಲೆಯ ಫರ್ಟಿಲೈಜರ‍್ಸ್ ಅಂಡ್ ಕೆಮಿಕಲ್ಸ್ ಲಿ. (ಜಿಎಸ್‌ಎಫ್‌ಸಿ)ಗೆ ಸೇರಿದ, ಪರವಾನಗಿ ಇಲ್ಲದೆ ಶೇಖರಿಸಿದ್ದ ೪೯.೬ ಟನ್ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.

ರಸಗೊಬ್ಬರವನ್ನು ಅಕ್ರಮವಾಗಿ ಶೇಖರಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಜಾಗೃತ ಕೋಶದ ಅಪರ ನಿರ್ದೇಶಕ ದೇವರಾಜು, ಮೈಸೂರು ಉಪ ವಿಭಾಗದ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಉಪ ಕೃಷಿ ನಿರ್ದೇಶಕಿ ಎಚ್.ಎನ್. ಮಮತ ಮತ್ತು ಸಹಾಯಕ ಕೃಷಿ ನಿರ್ದೇಶಕ ಯಾದವ ಬಾಬು, ಮಂಡ್ಯ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಸುನೀತ, ಜಿಲ್ಲಾ ರಸಗೊಬ್ಬರ ಪರಿವೀಕ್ಷಕ ಎಚ್.ಚನ್ನಕೇಶವಮೂರ್ತಿ ಅವರು ದಾಳಿ ನಡೆಸಿ, ಪರಿಶೀಲಿಸಿದಾಗ ಪರವಾನಗಿ ಇಲ್ಲದ ರಸಗೊಬ್ಬರವನ್ನು ಜಪ್ತಿ ಮಾಡಿದ್ದಾರೆ ಎಂದು ಮಂಡ್ಯ ಕೃಷಿ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಹಾಗೂ ರಸಗೊಬ್ಬರ ಪರಿವೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:-ಅ.14,15 ರಂದು ಮೈಸೂರಲ್ಲಿ ಬೌದ್ಧ ಮಹಾ ಸಮ್ಮೇಳನ

Tags:
error: Content is protected !!