Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಸಾಹಿತಿ ಭೈರಪ್ಪಗೆ ʼಕರ್ನಾಟಕ ರತ್ನʼ ಪ್ರಶಸ್ತಿ ನೀಡಲು ಒತ್ತಾಯಿಸಿ ಸಿಎಂ ಪತ್ರ ಬರೆದ ಸಂಸದ ಯದುವೀರ್‌

ಬೆಂಗಳೂರು : ಆನಾರೋಗ್ಯದ ಹಿನ್ನಲೆಯಲ್ಲಿ ಇತ್ತೀಚಿಗೆ ನಿಧನರಾದ ಖ್ಯಾತಿ ಕಾದಂಬರಿಕಾರ ಹಾಗೂ ಪ್ರತಿಷ್ಥಿತ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಲ್ ಭೈರಪ್ಪ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಮೈಸೂರು ಕ್ಷೇತ್ರದ ಸಂಸದ, ರಾಜವಂಶಸ್ಥ ಯದುವೀರ್ ಒಡೆಯರ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಯದುವೀರ್ ಒಡೆಯರ್, ಕನ್ನಡದ ಜನಮನ್ನಣೆಯ ಮೇರು ಸಾಹಿತಿ, ಮಹಾನ್ ಕಾದಂಬರಿಕಾರರು ಹಾಗೂ ಸರಸ್ವತಿ ಸಮ್ಮಾನ್, ಪದ್ಮಭೂಷಣ ಡಾ. ಎಸ್. ಎಲ್. ಭೈರಪ್ಪ ಅವರ ಅಗಿಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಅವರನ್ನು ಗೌರವಿಸಲು, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವಂತೆ ಮತ್ತು ಮೈಸೂರು ನಗರ ಕೇಂದ್ರ ಗ್ರಂಥಾಲಯವನ್ನು ಅವರ ಸ್ಮರಣಾರ್ಥ ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ  : ಮನ್‌ ಕಿ ಬಾತ್‌ನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪಗೆ ಪ್ರಧಾನಿ ಮೋದಿ ನಮನ

ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಖ್ಯಾತ ನಟ ಡಾ. ವಿಷ್ಣುರ್ವಧನ್ ಹಾಗೂ ಚಿತ್ರನಟಿ ಬಿ ಸರೋಜದೇವಿ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಕರ್ನಾಟಕ ರತ್ನ ಪ್ರಶಸ್ತಿಯು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆಯುವವರಿಗೆ 50 ಗ್ರಾಂ ತೂಕದ ಚಿನ್ನದ ಪದಕ, ನೆನಪಿನ ಕಾಣಿಕೆ ನೀಡಿ, ಶಾಲನ್ನು ಹೊದಿಸಿ ಗೌರವಿಸಲಾಗುತ್ತದೆ.

ಕರ್ನಾಟಕ ರತ್ನ ಪ್ರಶಸ್ತಿಯನ್ನ ಈವರೆಗೆ ಒಂಬತ್ತು ಸಾಧಕರಿಗೆ ನೀಡಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊದಲ ಬಾರಿಗೆ 1991 ರಲ್ಲಿ ಆರಂಭಿಸಲಾಯಿತು. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಕರ್ನಾಟಕ ಪ್ರಶಸ್ತಿಯನ್ನು ಮೊದಲ ಬಾರಿಗೆ 1992 ರಲ್ಲಿ ನೀಡಲಾಯಿತು.

ಮೊದಲ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಅವರಿಗೆ ನೀಡಿ ಗೌರವಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೂ ಹತ್ತು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಬಾರಿ ಅಂದರೆ 2021ರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಚಿತ್ರನಟ ದಿ. ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಕುವೆಂಪು – ಸಾಹಿತ್ಯ – 1992
ಡಾ. ರಾಜ್ಕುಮಾರ್ – ಚಲನಚಿತ್ರ – 1992
ಎಸ್.ನಿಜಲಿಂಗಪ್ಪ – ರಾಜಕೀಯ – 1999
ಸಿ.ಎನ್.ಆರ್.ರಾವ್ – ವಿಜ್ಞಾನ – 2000
ದೇವಿಪ್ರಸಾದ್ ಶೆಟ್ಟಿ – ವೈದ್ಯಕೀಯ – 2001
ಭೀಮಸೇನ ಜೋಷಿ – ಸಂಗೀತ – 2005
ಶ್ರೀ ಶಿವಕುಮಾರ ಸ್ವಾಮೀಗಳು – ಸಾಮಾಜಿಕ ಸೇವೆ – 2007
ದೇ. ಜವರೇಗೌಡ – ಸಾಹಿತ್ಯ -2008
ಡಿ. ವೀರೇಂದ್ರ ಹೆಗ್ಗಡೆ – ಸಾಮಾಜಿಕ ಸೇವೆ – 2009.
ದಿ. ಪುನೀತ್ ರಾಜ್ಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021

Tags:
error: Content is protected !!