Mysore
17
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮುಂದುವರಿದ ಡೊನಾಲ್ಡ್‌ ಟ್ರಂಪ್‌ ಸುಂಕ ಪ್ರಹಾರ: ಸಿನಿಮಾ ಮೇಲೂ ಸುಂಕ ಹೆಚ್ಚಳ

Trump Tariff

ವಾಷಿಂಗ್ಟನ್:‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಂಕ ಪ್ರಹಾರ ಮುಂದುವರಿಸಿದ್ದಾರೆ. ಆಮದು ಸರಕು, ಔಷಧ ಉತ್ಪನ್ನಗಳ ಮೇಲೆ ಪ್ರತಿ ಸುಂಕ ಹೆಚ್ಚಳದ ನಂತರ ಮನರಂಜನಾ ಕ್ಷೇತ್ರ ಸಿನಿಮಾ ಮೇಲೂ ಸುಂಕ ಹೆಚ್ಚಿಸಲು ಮುಂದಾಗಿದ್ದಾರೆ.

ಅಮೇರಿಕಾದಿಂದ ಹೊರಗೆ ತಯಾರಾದ ಅಮೇರಿಕೇತರ ಸಿನಿಮಾಗಳ ಮೇಲಿನ ತೆರಿಗೆಯನ್ನು ಶೇಕಡಾ.100ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಟ್ರಂಪ್‌ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಮ್ಮ ದೇಶದಲ್ಲಿ ಬೇರೆ ದೇಶಗ ಚಲನಚಿತ್ರಗಳು ಲಾಭ ಮಾಡಿಕೊಳ್ಳುತ್ತಿವೆ. ಅಮೇರಿಕಾ ಚಿತ್ರೋದ್ಯಮದ ವ್ಯವಹಾರವನ್ನು ಬೇರೆ ದೇಶಗಳ ಉದ್ಯಮಗಳು ಮಗುವಿನ ಕೈಯಲ್ಲಿರುವ ಕ್ಯಾಂಡಿಯನ್ನು ಕದ್ದು ತಿನ್ನುವ ರೀತಿಯಲ್ಲಿ ಹೈಜಾಕ್‌ ಮಾಡುತ್ತಿವೆ. ನಮ್ಮ ದೇಶದ ಉದ್ಯಮ ಉಳಿಸುವ ಉದ್ದೇಶದಿಂದ ಅಮೇರಿಕಾದ ಹೊರಗೆ ತಯಾರಾಗುವ ಸಿನಿಮಾಗಳ ಮೇಲೆ ಶೇಕಡಾ.100ರಷ್ಟು ತೆರಿಗೆ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ.

Tags:
error: Content is protected !!