Mysore
15
clear sky

Social Media

ಬುಧವಾರ, 21 ಜನವರಿ 2026
Light
Dark

ವಿಶ್ವವಿಖ್ಯಾತ ಮೈಸೂರು ದಸರಾ ಬಂದೋಬಸ್ತ್‌ಗೆ ಆಗಮಿಸಿರುವ ಪೊಲೀಸರಿಗೆ ಊಟದ ವ್ಯವಸ್ಥೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಬಂದೋಬಸ್ತ್‌ಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮೈಸೂರಿಗೆ ಆಗಮಿಸಿರುವ ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಕೇವಲ ಎರಡು ದಿನ ಮಾತ್ರ ಬಾಕಿಯಿದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನು ಓದಿ : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಸಿಎಂ, ಡಿಸಿಎಂಗೆ ವಿಶೇಷ ಉಡುಗೊರೆ ರೆಡಿ

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 6900ಕ್ಕೂ ಹೆಚ್ಚಿನ ಪೊಲೀಸರು ಆಗಮಿಸಿದ್ದು, ಇವರೆಲ್ಲರಿಗೂ ನಗರದ ಪೊಲೀಸ್‌ ಭವನದಲ್ಲಿ ಊಟ ತಯಾರಿ ಮಾಡಲಾಗುತ್ತಿದೆ.

ಅನಿಲ್ ಅಪೂರ್ವ ವೆಜ್ ಕ್ಯಾಂಟರಿನ್ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ನೂರಾರು ಅಡುಗೆ ಸಿಬ್ಬಂದಿಗಳಿಂದ ಊಟ ತಯಾರಿ ಕೆಲಸ ನಡೆಯುತ್ತಿದೆ. ಊಟದ ಗುಣಮಟ್ಟ ಕಾಪಾಡಿಕೊಂಡಿರುವ ಕ್ಯಾಟರಿಂಗ್ ಮಾಲೀಕರು, ಅಡುಗೆ ಮಾಡುವ ಸ್ಥಳದಲ್ಲೂ ಸ್ವಚ್ಛತೆ ಕಾಪಾಡಿಕೊಂಡು ಬಂದಿದ್ದಾರೆ.

ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗೂ ಸಂಜೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸ್ ಭವನದಲ್ಲೇ ಊಟ ಪ್ಯಾಕಿಂಗ್ ಮಾಡಲಾಗುತ್ತಿದೆ. ಪ್ಯಾಕಿಂಗ್ ಬಳಿಕ ಪೊಲೀಸರ ಕರ್ತವ್ಯದ ಸ್ಥಳಕ್ಕೆ ಊಟ ಸರಬರಾಜು ಆಗಲಿದೆ.

Tags:
error: Content is protected !!