Mysore
22
broken clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ಎಸಿಪಿಯಾದ ತಿಲಕ್‍: ‘ವರ್ಣತರಂಗ’ ಹಾಡುಗಳ ಬಿಡುಗಡೆ

ಪೊಲೀಸ್‍ ಪಾತ್ರದಲ್ಲಿ ತಿಲಕ್‍ ಅಭಿನಯದ ‘ಉಸಿರು’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಮತ್ತೊಮ್ಮೆ ಅವರು ಖಾಕಿ ಯೂನಿಫಾರ್ಮ್‍ ತೊಟ್ಟಿದ್ದಾರೆ. ಅವರೀಗ ‘ವರ್ಣತರಂಗ’ ಎಂಬ ಚಿತ್ರದಲ್ಲಿ ಎಸಿಪಿಯಾಗಿ ನಟಿಸಿದ್ದಾರೆ.

ಶ್ರೀ ಪಾಷನಾಮೂರ್ತಿ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಬೆಳ್ತಂಗಡಿ ಉದ್ಯಮಿ ಬಿ.ಶಿವಕುಮಾರ್ ನಿರ್ಮಿಸುತ್ತಿರುವ ‘ವರ್ಣತರಂಗ’ ಚಿತ್ರಕ್ಕೆ ತೀರ್ಥೆಶ್ ಕೊರಮೇರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ The Last Face ಎಂಬ ಅಡಿಬರಹ ಇದೆ.

ಈ ಚಿತ್ರದಲ್ಲಿ ನಾಯಕಿಯರಾಗಿ ಜೀವಿತಾ ಮತ್ತು ಸಾಕ್ಷಿ ಮೇಘನಾ ನಟಿಸಿದ್ದು, ಮಿಕ್ಕಂತೆ ವರ್ಧನ್, ಹೇಮಂತ್, ರಮೇಶ್ ಪಂಡಿತ್, ಬಲ ರಾಜವಾಡಿ, ಟೆನ್ನಿಸ್‌ ಕೃಷ್ಣ, ಜಯರಾಮ್, ಬಿರಾದಾರ್, ಭಗತ್, ಸುಂದರ್‌ ಭಟ್ ಮುಂತಾದವರು ನಟಿಸಿದ್ದಾರೆ.

ಇದನ್ನು ಓದು : ʻಗಾರ್ಡನ್ʼಗೆ ಹೊರಟ ಮನೋಜ್‍: ಕಸ ವಿಲೇವಾರಿ ಮಾಫಿಯಾದ ಸುತ್ತ

‘ವರ್ಣತರಂಗ’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ತೀರ್ಥೇಶ್‍, ‘ವರ್ಣತರಂಗ’ ಅಂದರೆ ಬಣ್ಣಗಳ ಅಲೆಗಳು ಎಂದರ್ಥ. ಒಬ್ಬ ವ್ಯಕ್ತಿ ಕಲರ್ ಫುಲ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾನೆ? ಆತ ನಕರಾತ್ಮಕವಾಗಿ ಚಿಂತನೆ ಮಾಡುತ್ತಾ, ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ? ಸಿನಿಮಾದಲ್ಲಿ ಸಾಕಷ್ಟು ಕುತೂಹಲಗಳು ಇರುವುದರಿಂದ ಇಷ್ಟನ್ನು ಮಾತ್ರ ಹೇಳಬಹುದು. ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಎಫ್‌ಎಕ್ಸ್ ಶೇಕಡ 25ರಷ್ಟು ಬರುತ್ತದೆ’ ಎಂದರು

ನಾನು ಈಗಾಗಲೇ ಎಸಿಪಿಯಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಮಾತು ಶುರು ಮಾಡಿದ ತಿಲಕ್‍, ‘ಇದರಲ್ಲೂ ಅದೇ ಪಾತ್ರವಿದ್ದರೂ ಕೇಸ್ ಬೇರೆಯದೆ ಆಗಿರುತ್ತದೆ. ಅದರಿಂದ ನೋಡುಗರಿಗೆ ಬೋರ್ ಅನಿಸುವುದಿಲ್ಲ’ ಎಂದರು.

‘ವರ್ಣರಂಜಿತ’ ಚಿತ್ರಕ್ಕೆ ಆಕಾಶ್‍ ರೆಡ್ಡಿ ಮತ್ತು ಯಶವಂತ್‍ ಭೂಪತಿ ಸಂಗೀತ, ಮನು ಗೌಡ ಛಾಯಾಗ್ರಹಣವಿದ್ದು, ’ಸುಕ್ಕ ಸುಕ್ಕ …’ ಎಂಬ ಹಾಡಿಗೆ ಚಂದನ್‌ ಶೆಟ್ಟಿ ಧ್ವನಿಯಾಗಿದ್ದಾರೆ. ಇನ್ನರೆಡು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.

Tags:
error: Content is protected !!