Mysore
22
mist

Social Media

ಮಂಗಳವಾರ, 06 ಜನವರಿ 2026
Light
Dark

ಅಸಲಿ ಆಟ ಶುರು: ‘ಬಿಗ್‍ ಬಾಸ್‍ 12’ ಕಾರ್ಯಕ್ರಮಕ್ಕೆ ಚಾಲನೆ

ಕಳೆದೊಂದು ವರ್ಷದಿಂದ ‘ಬಿಗ್‍ ಬಾಸ್‍’ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಕಳೆದ ವರ್ಷ ಕಾರ್ಯಕ್ರಮದ ಮುಕ್ತಾಯದ ಹೊತ್ತಿಗೆ ಮುಂದಿನ ವರ್ಷದಿಂದ ಈ ಕಾರ್ಯಕ್ರಮವನ್ನು ಸುದೀಪ್‍ ನಡೆಸಿಕೊಡುವುದಿಲ್ಲ ಎಂದು ಸುದ್ದಿಯಾಗಿತ್ತು. ಕೆಲವು ತಿಂಗಳ ಹಿಂದೆ ಸುದೀಪ್‍ ಖುದ್ದು ಪತ್ರಿಕಾಗೋಷ್ಠಿಯಲ್ಲಿ ‘ಬಿಗ್‍ ಬಾಸ್‍’ ಕಾರ್ಯಕ್ರಮದ 12ನೇ ಅವತರಣಿಕೆಯನ್ನು ನಡೆಸಿಕೊಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ, ಸೆಪ್ಟೆಂಬರ್‍ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗುವುದಾಗಿಯೂ ಹೇಳಿದ್ದರು.

ಅಂದರಂತೆ ‘ಬಿಗ್‍ ಬಾಸ್‍ – ಸೀಸನ್‍ 12’ ಕಾರ್ಯಕ್ರಮಕ್ಕೆ ಭಾನುವಾರ ಕೊನೆಗೂ ಚಾಲನೆ ಸಿಕ್ಕಿದೆ. ಸ್ಪರ್ಧಿಗಳು ಈಗಾಗಲೇ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಮನೆಗೆ ಹೋಗುವ ಸ್ಪರ್ಧಿಗಳ ಬಗ್ಗೆ ಹಲವು ಊಹಾಪೋಗಳಿದ್ದವು. ಅದಕ್ಕೆ ಪೂರಕವಾಗಿ ಕೆಲವು ಹೆಸರುಗಳು ನಿಜವಾಗಿವೆ.

ಇದನ್ನು ಓದಿ : ಬಿಗ್‌ಬಾಸ್‌ ಕನ್ನಡ 12ರ ಗ್ರ್ಯಾಂಡ್‌ ಓಪನಿಂಗ್‌ : ಸ್ಟೈಲಿಶ್‌ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಕಿಚ್ಚ

ಈ ಪೈಕಿ ಮನೆಗೆ ಹೋದವರಲ್ಲಿ ನಟ ‘ಕಾಕ್ರೋಚ್‍’ ಸುಧಿ, ‘ಕೊತ್ತಲವಾಡಿ’ ಚಿತ್ರದ ನಾಯಕಿ ಕಾವ್ಯಾ ಶೈವ, ಕಡಬಂ ಸತೀಶ್, ಗಿಲ್ಲಿ ನಟ, ಜಾನ್ವಿ, ಧನುಷ್‍, ಚಂದ್ರಪ್ರಭ, ಮಂಜುಭಾಷಿಣಿ, ರಾಷಿಕಾ, ಅಭಿಷೇಕ್‍, ಮಲ್ಲಮ್ಮ, ಅಶ್ವಿನಿ ಎಸ್‍.ಎನ್‍, ಧ್ರುವಂತ್‍, ರಕ್ಷಿತಾ ಶೆಟ್ಟಿ, ಬಾಡಿ ಬಿಲ್ಡರ್‍ ಕರಿಬಸಪ್ಪ, ಸ್ಪಂದನಾ, ಅಶ್ವಿನಿ ಗೌಡ, ಅಮಿತ್ ಮತ್ತು ಮಾಳು ಇದ್ದಾರೆ. ಈ 19 ಸ್ಪರ್ಧಿಗಳ ಪೈಕಿ ಹಲವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡವರಿದ್ದಾರೆ.

ಬರೀ ನಟ-ನಟಿಯರಷ್ಟೇ ಅಲ್ಲ, ಸೋಷಿಯಲ್‍ ಮೀಡಿಯಾದಲ್ಲಿ ದೊಡ್ಡ ಹೆಸರು ಮಾಡಿರುವ ಮತ್ತು ನಟನೆ ಹೊರತಾಗಿ ಬೇರೆಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಹಲವರು ಈ ಬಾರಿ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರೆಲ್ಲರನ್ನೂ ಸುದೀಪ್‍ ಮನೆಯೊಳಗೆ ಬರ ಮಾಡಿಕೊಂಡಿದ್ದು, ಇಂದಿನಿಂದ ಕಾರ್ಯಕ್ರಮ ರಾತ್ರಿ 09ಕ್ಕೆ ಪ್ರಸಾರವಾಗಲಿದೆ.

ವಿಶೇಷವೆಂದರೆ, ಮೊದಲ ದಿನವೇ ಒಬ್ಬರು ಮನೆಯಿಂದ ಹೊರಗೆ ಹೋಗಬೇಕಿದ್ದು, 19 ಸ್ಪರ್ಧಿಗಳ ಪೈಕಿ ಟಾಟಾ ಬಾಯ್‍ಬಾಯ್‍ ಹೇಳೋರು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Tags:
error: Content is protected !!