Mysore
15
scattered clouds

Social Media

ಶನಿವಾರ, 31 ಜನವರಿ 2026
Light
Dark

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ವಜ್ರಮುಷ್ಠಿ ಕಾಳಗಕ್ಕೆ ಜೆಟ್ಟಿಗಳ ಜೋಡಿ ಕಟ್ಟುವಿಕೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಜ್ರಮುಷ್ಠಿ ಕಾಳಗಕ್ಕೆ ಜೆಟ್ಟಿಗಳ ಜೋಡಿ ಕಟ್ಟುವಿಕೆ ಮಾಡಲಾಯಿತು.

ಅರಮನೆ ಆವರಣದಲ್ಲಿ ನಡೆದ ಜೋಡಿ ಕಟ್ಟುವಿಕೆ ಕಾರ್ಯದಲ್ಲಿ ಮೈಸೂರು, ಬೆಂಗಳೂರು, ಚನ್ನಪಟ್ಟಣ, ಚಾಮರಾಜನಗರದಿಂದ ಆಗಮಿಸಿದ್ದ ಜೆಟ್ಟಿಗಳು ಭಾಗಿಯಾಗಿದ್ದರು.

ಇದನ್ನು ಓದಿ : ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಗಜಪಡೆಗೆ ಜಂಬೂಸವಾರಿ ರಿಹರ್ಸಲ್‌

ಚಾಮರಾಜನಗರ v/s ಚನ್ನಪಟ್ಟಣ ಜೆಟ್ಟಿಗಳ ನಡುವೆ ಕಾದಾಟ ನಡೆಯಲಿದ್ದು, ಮೈಸೂರು v/s ಬೆಂಗಳೂರು ಜೆಟ್ಟಿಗಳ ಮದುವೆ ಮತ್ತೊಂದು ಕಾದಾಟ ನಡೆಯಲಿದೆ.

ನಾಲ್ಕು ಜನ ಜೆಟ್ಟಿಗಳು ಎರಡು ಜೋಡಿಗಳ ನಡುವೆ ವಜ್ರಮುಷ್ಠಿ ಕಾಳಗ ನಡೆಯಲಿದ್ದು, ಉಸ್ತಾದ್‌ ಮಾಧವ್ ಜೆಟ್ಟಿ ನೇತೃತ್ವದಲ್ಲಿ ಜೋಡಿ ಕಟ್ಟುವಿಕೆ ಕಾರ್ಯ ನಡೆಯಿತು.

ಚಾಮರಾಜನಗರದ ಮಹೇಶ್ ನಾರಾಯಣ್ ಜೆಟ್ಟಿ, ಚನ್ನಪಟ್ಟಣದ ರಾಘವೇಂದ್ರ ಜೆಟ್ಟಿ, ಮೈಸೂರಿನ ಮಂಜುನಾಥ್ ಜೆಟ್ಟಿ, ಬೆಂಗಳೂರಿನ ಪ್ರದ್ಯುಮ್ನ ಜೆಟ್ಟಿ ಫೈನಲ್ ಆಗಿದ್ದು, ಜಂಬೂಸವಾರಿ ದಿನದಂದು ವಜ್ರಮುಷ್ಠಿ ಕಾಳಗ ನಡೆಯಲಿದೆ.

Tags:
error: Content is protected !!