Mysore
25
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಮೈಸೂರು | ಸಮೀಕ್ಷೆಗೆ ಗೈರು ; 8 ಸಹ ಶಿಕ್ಷಕರು ಅಮಾನತು

ಮೈಸೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಜಿಲ್ಲೆಯಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷಾ ಗಣತಿ ಕಾರ್ಯಕ್ಕೆ ಹಾಜರಾಗದ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಗಣತಿ ಕಾರ್ಯಕ್ಕೆ ಹಾಜರಾಗುವವರು ಅಧಿಕಾರಿಗಳ ದೂರವಾಣಿ ಕೆರೆಯನ್ನು ಸ್ವೀಕರಿಸದೇ ಬೇಜವಾಬ್ದಾರಿ ಹಾಗೂ ಅತೀವ ನಿರ್ಲಕ್ಷ್ಯ ತೋರಿದ 8 ಸಹ ಶಿಕ್ಷಕರನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಆದೇಶದ ಮೇರೆಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ :-ಬಿಸಿಸಿಐಗೆ ನೂತನ ಅಧ್ಯಕ್ಷರ ನೇಮಕ

ಅಮಾನತು ಆದ ಸಹ ಶಿಕ್ಷಕರು….
1.ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕೆಸರೆ, ಉತ್ತರ ವಲಯ, ಮೈಸೂರು
2.ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆ, ರಾಜೇಂದ್ರನಗರ, ಉತ್ತರ ವಲಯ, ಮೈಸೂರು,
3.ಆದರ್ಶ ವಿದ್ಯಾಲಯ, ಜಾಕಿ ಕ್ವಾಟ್ರಸ್, ದಕ್ಷಿಣ ವಲಯ, ಮೈಸೂರು
4 ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಕರಿಗೌಡರ ಬೀದಿ, ಹುಣಸೂರು ತಾಲ್ಲೂಕು, ಮೈಸೂರು
5.ಶ್ರೀ ಶಾರದಾ ಪ್ರೌಢಶಾಲೆ, ಬಿ.ಬಿ. ಗಾರ್ಡನ್, ದಕ್ಷಿಣ ವಲಯ, ಮೈಸೂರು
6.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರುಳಯ್ಯನಕೊಪ್ಪಲು, ಹುಣಸುರು ತಾಲ್ಲೂಕು
7.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಿಮುದ್ದನಹಳ್ಳಿ, ಹುಣಸೂರು ತಾಲ್ಲೂಕು
8.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುರುಪುರ, ಹುಣಸೂರು ತಾಲ್ಲೂಕು

ಈ ಶಾಲೆಯ ಸಹ ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Tags:
error: Content is protected !!