Mysore
15
clear sky

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

Mysuru Dasara | ಯುವ ದಸರಕ್ಕೆ ಸಂಭ್ರಮದ ತೆರೆ

ಮೈಸೂರು : ಧೂಮ್ ಮಚಾಲೇ ಧೂಮ್ ಮಚಾಲೇ ಧೂಮ್ ಎಂದು ಸುನಿಧಿ ಚೌಹಾಣ್ ಕುಣಿತ ಜೊತೆಗಿನ ಗಾಯನಕ್ಕೆ, ನೆರೆದಿದ್ದ ಪ್ರೇಕ್ಷಕರೆಲ್ಲ ಹಾಡಿನ ಮತ್ತಿನಲ್ಲಿ ತೇಲಿ, ಹಾಡುತ ಹುಚ್ಚೆದ್ದು ಜೊತೆ ಭರ್ಜರಿ ಡ್ಯಾನ್ಸ್ ಮಾಡುತ ಯುವ ದಸರಾಕ್ಕೆ ತೆರೆ ಎಳೆಯಲಾಯಿತು.

ನಗರದ ಹೊರವಲಯದ ಉತ್ತನಹಳ್ಳಿ ದಸರಾ ಉಪ ಸಮಿತಿ ಆಯೋಜಿಸಿದ್ದ ಐದು ದಿನಗಳ ಯುವ ದಸರಾ ಸಡಗರಕ್ಕೆ ಮುಕ್ತಾಯ ಹಾಡಲಾಯಿತು. ಕೊನೆಯ ದಿನದ ಸಂಗೀತ ಗಾಯನ ನಡೆಸಿಕೊಟ್ಟ ಜನಪ್ರಿಯ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಗಾಯನ ಶೈಲಿ, ಸಂಗೀತ ಪ್ರಿಯರು ಹಾಗೂ ಪಡ್ಡೆ ಹುಡುಗರಿಗೆ ಮೋಡಿ ಮಾಡಿ ಸಕ್ಕತ್ ತ್ರಿಲ್ ನೀಡಿತು.

ಗಾಯಕಿ ಸುನಿಧಿ ಗಾಯನಕ್ಕೆ ಕಾದು ಕುಳಿತ ಪ್ರೇಕ್ಷಕರಿಗೆ ವೇದಿಕೆಯಲ್ಲಿ ಹೆಜ್ಜೆ ಇಟ್ಟು, ಧೂಮ್ ಹಿಂದಿ ಚಲನಚಿತ್ರ ಹಾಡು ಹಾಡುತ್ತಲೇ ಯುವ ಜನತೆಗೆ ಕಿಕ್ ಏರಿಸಿ ಕುಣಿದು ಕುಪ್ಪಳಿಸುವಂತೆ ಪ್ರಚೋಽಸಿದರು. ಗಾಯನದ ವೇಳೆ ತುಂತುರು ಮಳೆಯ ಆಗಮನದಲ್ಲೂ ಯುವಕ ಯುವತಿಯರು ಜಗ್ಗದೆ ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿದರು.

ಇದನ್ನೂ ಓದಿ:-Mysuru Dasara | ಯುವ ದಸರಕ್ಕೆ ಸಂಭ್ರಮದ ತೆರೆ

ಬಾಲಿವುಡ್ ಸಿನಿಮಾಗಳ ಮೇನ್ ಇಸ್ಕು ಮೇರೆ, ಐಸಾ ಮೇರಿ ಪ್ಯಾರ್ ಹೈ, ಹ್ಯಾನೀ ಹ್ಯಾನಿ ಚುಟ್ಕೆಯ, ಮೈ ಕ್ರೇಜಿ ಗರ್ಲ್ ಮೈ ಕ್ರೇಜಿ ಗರ್ಲ್, ಫನಾ ಚಿತ್ರದ ಮೇರೆ ಹಾತ್ ಮೇ , ತೇರಿ ಮೇರಿ ಇಸ್ಕು ಸೇ, ಮೇರಿ ಕಮಲಿ ಕಮಲಿ, ಪುಷ್ಪ ಚಿತ್ರದ ಸಾಮಿ ಸಾಮಿ ಹಾಡುಗಳನ್ನು ಹಾಡಿ ಯುವ ದಸರಾ ಅದ್ದೂರಿ ಸಂಭ್ರಮಕ್ಕೆ ಸಾಕ್ಷಿಯಾದರು.

ಕನ್ನಡ ಹಾಡಿನ ಕರಾಮತ್ತು
ಮುಂಗಾರು ಮಳೆ ಚಿತ್ರದ ಕುಣಿದು ಕುಣಿದು ಬಾರೇ ಹಾಗೂ ಜೋಗಿ ಚಿತ್ರದ ಚಿಕು ಬುಕ್ ರೈಲು ನಿಲ್ಲೋದಿಲ್ಲ ಎಲ್ಲೂ, ರಾ ರಾ ರಾಕಮ್ಮ ಹಾಡು ಹಾಡುತ್ತಲೇ ಇಡೀ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ತಾವು ಕೂಡ ಧ್ವನಿಗೂಡಿಸಿ ಶಿಳ್ಳೆ, ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ಯುವ ದಸರಾ ಅಂತಿಮ ದಿನ ಮೈದಾನ ಕಿಕ್ಕಿರಿದು ತುಂಬಿತ್ತು. ಸುನಿಽ ಚೌಹಾಣ್ ಗಾಯನಕ್ಕೆ ಕುಣಿದು ಶಿಳ್ಳೆ ಚಪ್ಪಾಳೆ ತಟ್ಟುವ ಮೂಲಕ ಯುವಕರು, ಪ್ರಸ್ತುತ ವರ್ಷದ ಯುವ ದಸರಾ ಸಂಗೀತ ಸಂಜೆಯನ್ನು ಪೂರ್ಣಗೊಳಿಸಿದರು.

ರಾಜಕಾರಣಿಗಳ ಕುಟುಂಬಕ್ಕೆ ಆತಿಥ್ಯ, ಪೊಲೀಸರ ಪತ್ರಕರ್ತರ ನಡುವೆ ಮಾತಿನ ಚಕಮಕಿ
ಕೊನೆಯ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರತಿ ಭಾರಿಯಂತೆ ರಾಜಕಾರಣಿಗಳು, ಅಧಿಕಾರಿಗಳು ವರ್ಗ ಹೆಚ್ಚೆ ಇತ್ತು. ಕುಟುಂಬಸ್ಥರೇ ಎಲ್ಲೆಡೆ ಕುಳಿತು ಕಾರುಬಾರು ನಡೆಸಿದರು. ವಿಐಪಿ ಪಾಸ್ ವಿತರಣೆಗಳು, ರಾಜಕಾರಣಿಗಳ ಆಪ್ತರು ಎಗ್ಗಿಲ್ಲದೇ ವಿಐಪಿ ಸ್ಥಳಕ್ಕೆ ಲಗ್ಗೆಯಿಟ್ಟು ಪೊಲೀಸರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಅಧಿಕಾರಿಗಳು ತಮ್ಮ ಮಕ್ಕಳು, ಕುಟುಂಬದವರನ್ನು ಮಾಧ್ಯಮ ಗ್ಯಾಲರಿಗೆ ಕೂರಿಸಲು ಯತ್ನಿಸಿದರ ಪರಿಣಾಮ ಪತ್ರಕರ್ತ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಪೊಲೀಸರು ಏನು ಮಾಡಲಾಗದೇ ಆಸಹಾಯಕಂತೆ ವರ್ತಿಸಿದರು. ಇದರ ನಡುವೆ ಸುನಿಧಿ ಚೌಹಾಣ್ ಗಾಯನಕ್ಕೆ ಸ್ವಲ್ಪ ಸಮಯ ಅಡೆತಡೆ ಉಂಟಾಯಿತು.

Tags:
error: Content is protected !!