ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ದಂಪತಿಗಳಿಗೆ ಟಾಂಗಾ ಸವಾರಿಯನ್ನು ಆಯೋಜನೆ ಮಾಡಲಾಗಿತ್ತು.
ನಗರದ ಟೌನ್‌ಹಾಲ್‌ನಲ್ಲಿ ಆರಂಭವಾದ ಟಾಂಗಾ ಸವಾರಿಗೆ ನಟ ಪ್ರಕಾಶ್ ತುಂಬಿನಾಡು ಚಾಲನೆ ನೀಡಿದರು. ಪಾರಂಪರಿಕ ಉಡುಗೆ ತೊಟ್ಟು ಟಾಂಗಾ ಸವಾರಿಯಲ್ಲಿ ಭಾಗಿಯಾಗಿದ್ದ ದಂಪತಿಗಳು ಟಾಂಗಾ ಮೇಲೆ ಕುಳಿತು ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಟಾಂಗಾ ಸವಾರಿಯಲ್ಲಿ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳು ಮಿಂಚಿದರು.





