ಪ್ರಸಾದ್ ಲಕ್ಕೂರು
ಮುಂದುವರಿದ ಆಪ್ ತಾಂತ್ರಿಕ ತೊಂದರೆ; ಗಣತಿದಾರರನ್ನು ಕಾಡುತ್ತಿರುವ ಸರ್ವರ್ ಬ್ಯುಸಿ
ಚಾಮರಾಜನಗರ: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮನೆ ಮನೆಗಳಲ್ಲಿ ಅಂಟಿಸಿ ರುವ ಮನೆ ಸಂಖ್ಯೆಯು (ಯುಎಚ್‌ಐಡಿ- ಯುನಿಕ್ ಐಡೆಂಟಿಫಿಕೇಶನ್ ನಂಬರ್) ಕೆಲವು ಕಡೆ ಅಳಿಸಿ ಹೋಗಿದ್ದು, ಸರಿಯಾಗಿ ಸಮೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ.
ಇದರಿಂದಾಗಿ ಆಪ್‌ನಲ್ಲಿ ಯುಎಚ್‌ಐಡಿ ನಂಬರ್ ಬರುತ್ತಿಲ್ಲ. ಇದಲ್ಲದೆ ಯುಎಚ್‌ಐಡಿ ನಂಬರ್ ಲಭ್ಯವಿರುವ ಕಡೆ ಆಪ್ ತೆರೆದು ಸಮೀಕ್ಷೆ ಶುರು ಮಾಡಿದರೆ ಇದ್ದಕ್ಕಿದ್ದಂತೆ ಹ್ಯಾಂಗ್ ಆಗಿ ಸರ್ವರ್ ಬ್ಯುಸಿ ಎಂಬ ಉತ್ತರ ಬರುತ್ತಿದೆ. ಇದರಿಂದ ಜಿಲ್ಲಾದ್ಯಂತ ೫ನೇ ದಿನವೂ ಸಮೀಕ್ಷೆ ನಡೆಸಲು ಸಾಧ್ಯವಾಗದೆ ಗಣತಿದಾರರು ಮನೆಗೆ ವಾಪಸ್ ಹೋಗಿದ್ದಾರೆ.
ತಿಂಗಳ ಹಿಂದೆಯೇ ಯುಎಚ್‌ಐಡಿ ನಂಬರ್ ಇರುವ ಚೀಟಿಯನ್ನು ಪ್ರತಿಯೊಂದು ಮನೆ ಮನೆಗೂ ಅಂಟಿಸಲಾಗಿದೆ. ಆದರೆ. ಅಲ್ಲಿರುವ ಯುಎಚ್‌ಐಡಿ ನಂಬರ್ ಅಳಿಸಿ ಹೋಗಿದೆ. ಇದರಿಂದ ಸಮೀಕ್ಷೆಗೆ ತೊಂಡಕಾಗಿ ಪರಿಣಮಿಸಿದೆ.
ಇದನ್ನು ಓದಿ : ವ್ಯರ್ಥ ಪದಾರ್ಥಗಳ ಸಂಗ್ರಹಣೆ ಬ್ಯಾಂಕ್
ಹಾಗಾಗಿ ಆಪ್‌ನಲ್ಲಿ ಯುಎಚ್‌ಐಡಿ ಸಂಖ್ಯೆ ನಮೂದಿಸುವ ಅವಕಾಶವೇ ಸಿಗಲಿಲ್ಲ. ಬದಲಿಗೆ. ‘ಸಮೀಕ್ಷೆ ಮುಗಿದಿದೆ. ಹೊಸ ಸರ್ವೆ ಆರಂಭಿಸಿ’ ಎಂಬ ಅಡಿ ಸಾಲು ನೋಡಿ ಸಾಕಾಯಿತು ಎಂದು ಕೆಲವು ಸಮೀಕ್ಷಕರು ‘ಆಂದೋಲನ’ಕ್ಕೆ ತಿಳಿಸಿದರು.
ಯುಎಚ್‌ಐಡಿ ಸಂಖ್ಯೆ ಅಳಿಸಿ ಹೋಗಿದ್ದು ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಽಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ. ತುರ್ತಾಗಿ ಸರಿಪಡಿಸಲಾಗುತ್ತದೆ ಎಂಬ ಉತ್ತರ ಬರುತ್ತಿದೆ ಎಂದು ಸಮೀಕ್ಷೆದಾರರು ತಿಳಿಸಿದ್ದಾg
‘ಆಫ್‌ಲೈನ್ ಸಮೀಕ್ಷೆಗೆ ಅವಕಾಶ ಕಲ್ಪಿಸಿ’:
ಆನ್‌ಲೈನ್ ಸಮೀಕ್ಷೆಗೆ ಎದುರಾದ ತಾಂತ್ರಿಕ ತೊಂದರೆಗಳಿಂದ ಬೇಸತ್ತಿರುವ ಸಮೀಕ್ಷೆದಾರರು, ಆಫ್‌ಲೈನ್ ಸಮೀಕ್ಷೆ ನಡೆಸಲು ಅವಕಾಶ ನೀಡಬೇಕು. ಆಗ ಸರ್ವರ್ ಸಮಸ್ಯೆ ಇರುವುದಿಲ್ಲ; ಬೇಗ ಮನೆಗಳ ಸಮೀಕ್ಷೆ ನಡೆಸಲು ಸಾಧ್ಯ ಎಂದು ಗಣತಿದಾರರು ಹೇಳುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಅಚ್ಚುಕಟ್ಟಾಗಿ ಆಫ್‌ಲೈನ್ ಸಮೀಕ್ಷೆಗಳನ್ನು ನಡೆಸಿದ್ದೇವೆ. ಈಗಿನ ಆಪ್‌ನಿಂದ ಸಮಸ್ಯೆಯಾಗಿದೆ. ಸುಮ್ಮನೆ ಅಲೆದಾಡಬೇಕಿದೆ. ೫ ದಿನಗಳಾದರೂ ತಾಂತ್ರಿಕ ಸಮಸ್ಯೆಗಳು ಪರಿಹಾರವಾಗದೆ ಬೇಸತ್ತಿರುವ ಗಣತಿದಾರರು ಮೊದಲು ಆಪ್‌ನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು. ನೆಮ್ಮದಿಯಿಂದ ಸಮೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮೇಲ್ವಿಚಾರಕರಲ್ಲಿ ಮನವಿ ಮಾಡುತ್ತಿದ್ದಾರೆ.
” ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿ ಖುದ್ದು ಸಮೀಕ್ಷೆ ಕಾರ್ಯವನ್ನು ಮೊಬೈಲ್ ಆಪ್‌ನಲ್ಲಿ ಪರಿಶೀಲಿಸಿದ್ದೇನೆ. ಪ್ರಸ್ತುತ ತಾಂತ್ರಿಕ ಸಮಸ್ಯೆ ಪರಿಹರಿಸಲಾ ಗಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದಲ್ಲಿ ಪರಿಹಾರಕ್ಕಾಗಿ ತಾಂತ್ರಿಕ ಪರಿಣತರನ್ನು ತಾಲ್ಲೂಕುವಾರು ನೇಮಕ ಗೊಳಿಸಲಾಗಿದೆ. ಮನೆಗಳಿಗೆ ಅಂಟಿಸಿರುವ ಯು ಎಚ್‌ಐಡಿ ಸಂಖ್ಯೆ ಅಳಿಸಿರುವುದು ಗಮನಕ್ಕೆ ಬಂದಿದೆ. ಆ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು.”
-ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ





