ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂದು ಪೊಲೀಸ್ ಬ್ಯಾಂಡ್ ಅದ್ಧೂರಿಯಾಗಿ ಜರುಗಿತು.
ಅರಮನೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ಪೊಲೀಸ್ ಸಮೂಹ ವಾದ್ಯವೃಂದದಿಂದ ಗಾನಸುಧೆ ಏರ್ಪಟ್ಟಿತು. ಪೋಲೀಸ್ ಬ್ಯಾಂಡ್ ಸಂಗೀತ ರಸಸಂಜೆಯು ಪ್ರೇಕ್ಷಕರಿಗೆ ಮುದ ನೀಡಿತು.
ಕರ್ನಾಟಕ, ಆಂಗ್ಲ ಪೋಲೀಸ್ ಬ್ಯಾಂಡ್ ಸಾಂಸ್ಕೃತಿಕ ಸಂಗೀತ ಉಣ ಬಡಿಸಿದ್ದು, ಪ್ರಸಿದ್ಧ ಸಂಗೀತ ಲಹರಿಗಳನ್ನು ನುಡಿಸುವ ಮುಖಾಂತರ ನೆರೆದಿದ್ದ ಜನರನ್ನು ಮನರಂಜನೆಗೊಳಿಸಲಾಯಿತು.
ಇದನ್ನೂ ಓದಿ:-ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್
ಪೊಲೀಸರು ವಿಂಡ್ ಮಾರ್ಚ್, ವಂದೇ ಮಾತರಂ, ಕಾಯೇ ದುರ್ಗಿ, ಸಂಗೀತ ಕೃತಿಗಳ ನುಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಮಡದಿಯ ಜೊತೆ ಕೂತು ಪೊಲೀಸ್ ಬ್ಯಾಂಡ್ ಆಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಜಿ.ಟಿ ದೇವೇಗೌಡ, ಶ್ರೀವತ್ಸ, ಎಂಎಲ್ಸಿ ಡಾ.ಶಿವಕುಮಾರ್, ಪೊಲೀಸ್ ಮಹಾ ನಿರ್ದೇಶಕ ಸಲೀಂ, ಪೋಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸೇರಿದಂತೆ ನೂರಾರು ಜನ ಸಾರ್ವಜನಿಕರು ಭಾಗಿಯಾಗಿದ್ದರು.





