Mysore
28
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಚಾಮುಂಡಿ ಗುಡಿಯಲ್ಲಿಲ್ಲ, ಹೋರಾಡುವ ಮಹಿಳೆಯರಲ್ಲಿದ್ದಾಳೆ : ನಾಗಲಕ್ಷ್ಮಿ ಬಣ್ಣನೆ

ಮೈಸೂರು : ತನ್ನ ಅಸ್ತಿತ್ವಕ್ಕಾಗಿ, ತನ್ನ ಧ್ವನಿಗಾಗಿ, ತನ್ನ ಮೇಲಾಗುತ್ತಿರುವ ಯಾವುದೇ ಶೋಷಣೆ, ದೌರ್ಜನ್ಯಗಳ ವಿರುದ್ಧ ಹೋರಾಡುವ ಮಹಿಳೆಯಲ್ಲಿ ಚಾಮುಂಡೇಶ್ವರಿ ಸ್ಥಾಪಿತವಾಗಿದ್ದಾಳೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಬಣ್ಣಿಸಿದರು.

ನಗರದ ಜೆ.ಕೆ.ಮೈದಾನದಲ್ಲಿ ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ದಸರಾ ಎಂದರೆ ತಾಯಿ ಚಾಮುಂಡೇಶ್ವರಿಯ ಆರಾಧನೆ. ಚಾಮುಂಡೇಶ್ವರಿ ಗುಡಿಯಲಿಲ್ಲ, ನಾಡಿನ ಹೆಣ್ಣಿನ ಅಂತರಂಗದಲ್ಲಿದ್ದಾಳೆ. ಪ್ರತಿಯೊಂದು ಹೆಣ್ಣಿನಲ್ಲೂ ಚಾಮುಂಡಿಯನ್ನು ಕಾಣಲು ಸಾಧ್ಯ ಎಂದರು.

ಇದನ್ನೂ ಓದಿ:-ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ : ಪ್ರಮುಖ ನಿರ್ಣಯ ಹೀಗಿವೆ….

ಸಮಾಜದಲ್ಲಿ ಹಲವು ಮಹಿಳೆಯರಿಗೆ ಸಂಪ್ರದಾಯ, ಸಂಸಾರದ ಸರಪಳಿ ಬಿಗಿದು ಕಟ್ಟಿ ಹಾಕಲಾಗಿದೆ. ಇದರಿಂದ ನಮ್ಮ ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದ ಎಷ್ಟೋ ಮಹಿಳೆಯರು ತನ್ನ ಅಸ್ತಿತ್ವಕ್ಕಾಗಿ ಧ್ವನಿ ಎತ್ತಲು ಸಾಧ್ಯವಾಗಿಲ್ಲ. ಗಂಡ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಿದರೂ ಸಮಾಜ ಮಹಿಳೆಯನ್ನು ಹೊಂದಿಕೊಂಡು ಹೋಗುವಂತೆ, ಅನುಸರಿಸಿಕೊಂಡು ಹೋಗುವಂತೆ ಪುಸಲಾಯಿಸುತ್ತಾ ಬಂದಿದೆ. ಇದೆಲ್ಲವನ್ನು ಮೆಟ್ಟಿ ನಿಲ್ಲುವ ಕಾರ್ಯಕ್ಕೆ ಮಹಿಳೆಯರು ಮುಂದಾಗಬೇಕು. ನಮ್ಮದೇ ಆದ ಬದುಕು, ಜೀವನ ಇದೆ. ಅದನ್ನ ನಾವೇ ಮುನ್ನಡೆಸುವಂತಾಗಬೇಕು. ಅನ್ಯಾಯದ ವಿರುದ್ಧ ಹೋರಾಟವಾದರೆ ಮಾತ್ರ ಚಾಮುಂಡೇಶ್ವರಿ ಪ್ರತಿ ಮಹಿಳೆಯ ಪ್ರತಿ ನಿಽಯಾಗಲು ಸಾಧ್ಯ ಎಂದು ಹೇಳಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ಮಹಿಳಾ ಮತ್ತು ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು, ಉಪ ಸಮಿತಿ ಉಪ ವಿಶೇಷಾಽಕಾರಿ ಬಿ.ಎಂ.ಸವಿತಾ, ಶಿಶು ಅಭಿವೃದ್ಧಿ ಯೋಜನಾಽಕಾರಿ ಕೆ.ಎಸ್.ಭವ್ಯಶ್ರೀ, ಶಶಿರೇಖಾ, ಲತಾ ಮೋಹನ್, ಬಿ.ಎಂ.ಸವಿತಾ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!