ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆ ತಾಲೀಮು ಯಶಸ್ವಿಯಾಗಿದೆ ಎಂದು ಡಿಸಿಎಫ್ ಡಾ.ಪ್ರಭುಗೌಡ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀರಂಗಪಟ್ಟಣದ ದಸರಾಗೆ ಮಹೇಂದ್ರ, ರೂಪ, ಕಾವೇರಿ ಆನೆಗಳು ಆಯ್ಕೆಯಾಗಿವೆ. ದಸರಾ ಗಜಪಡೆಗೆ ತಾಲೀಮು ಯಶಸ್ವಿ ಆಗಿದೆ. ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಗಜಪಡೆ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ ಎಂದು ಹೇಳಿದರು.
ಇದನ್ನು ಓದಿ: ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ಗಜಪಡೆಗೆ ಅಂತಿಮ ಹಂತದ ಸಿಡಿಮದ್ದು ತಾಲೀಮು
ಇನ್ನು ದಸರಾ ಆನೆಗಳ ಮುಂದೆ ಯುವತಿ ರೀಲ್ಸ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದಸರಾ ಆನೆಗಳ ಮುಂದೆ ರೀಲ್ಸ್ ಮಾಡಿದ್ದ ಹುಡುಗಿಗೆ ದಂಡ ಹಾಕಿದ್ದೇವೆ. ಆಕೆ ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಬಂದ ಬಳಿಕ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.





