ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.ದಸರಾ ಉದ್ಘಾಟನೆಗೆ ಚಾಮುಂಡಿ ಬೆಟ್ಟ ಸಜ್ಜಾಗಿದ್ದು, ಈಗಾಗಲೇ ಉತ್ಸವ ಮೂರ್ತಿಯನ್ನು ವೇದಿಕೆ ಮೇಲೆ ತರಲಾಗಿದೆ.
ಚಾಮುಂಡೇಶ್ವರಿ ಉತ್ಸವ ಮೂರ್ತಿ ಗಾಡ ನೀಲಿ ಬಣ್ಣದ ಜರತಾರಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದು, ವಿವಿಧ ಹೂಗಳಿಂದ ಬೆಳ್ಳಿ ಪಲ್ಲಕ್ಕಿ ಸಿಂಗರಿಸಿ ಉತ್ಸವ ಮೂರ್ತಿಯನ್ನು ಪ್ರತಿಸ್ಥಾಪನೆ ಮಾಡಲಾಗಿದೆ.
ವರ್ಷವಿಡಿ ತಾಯಿಯ ಮೂರ್ತಿಯನ್ನು ಮೈಸೂರು ಅರಮನೆಯಲ್ಲಿ ಇರಿಸಲಾಗುತ್ತದೆ.
ದಸರಾ ವೇಳೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ತಂದು ಸಿಂಗರಿಸಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.
ಜಂಬೂ ಸವಾರಿ ದಿನ ಆನೆ ಮೇಲು ಕುಳಿತು ಜನರಿಗೆ ದರ್ಶನ ಕೊಡಲಿದ್ದು,
ಗಣ್ಯರಿಂದ ಕೆಲವೇ ಹೊತ್ತಿನಲ್ಲಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ.





