Mysore
18
overcast clouds

Social Media

ಭಾನುವಾರ, 25 ಜನವರಿ 2026
Light
Dark

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಸೇನಾ ಯೋಧ ಮೃತಪಟ್ಟಿದ್ದಾರೆ.

ಇದೇ ವೇಳೆ ಜೈಶ್‌ ಎ ಮೊಹಮ್ಮದ್‌ ಸಂಘಟನೆಯವರು ಎನ್ನಲಾದ ನಾಲ್ವರು ಶಂಕಿತ ಉಗ್ರರು ಭದ್ರತಾ ಪಡೆಯ ಬಲೆಗೆ ಬಿದ್ದಿದ್ದಾರೆ.

ಜಮ್ಮು ಪ್ರದೇಶದ ಉಧಂಪುರ, ದೋಡಾ ಮತ್ತು ಕಥುವಾ ಜಿಲ್ಲೆಗಳನ್ನು ಸಂಪರ್ಕಿಸುವ ಪರ್ವತ ಶ್ರೇಣಿಯ ತ್ರಿ-ಜಂಕ್ಷನ್‌ ಆಗಿರುವ ಉಧಂಪುರ ಬಸಂತಗಢ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಸೇನೆಯು ತಿಳಿಸಿದ ನಂತರ ನಿನ್ನೆ ಸಂಜೆ ಈ ಎನ್‌ಕೌಂಟರ್‌ ಸಂಭವಿಸಿದೆ.

ಏತನ್ಮಧ್ಯೆ, ಭಯೋತ್ಪಾದಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರತಿ-ಗುಪ್ತಚರ ಘಟಕವು ಕಾಶ್ಮೀರ ಕಣಿವೆಯ ಏಳು ಜಿಲ್ಲೆಗಳಾದ ಶ್ರೀನಗರ, ಬಾರಾಮುಲ್ಲಾ, ಅನಂತನಾಗ್, ಕುಪ್ವಾರಾ, ಹಂದ್ವಾರ, ಪುಲ್ವಾಮಾ ಮತ್ತು ಶೋಪಿಯಾನ್‍ನಲ್ಲಿ ತೀವ್ರ ಶೋಧ ನಡೆಸಿತು. ದಾಳಿಯ ಸಮಯದಲ್ಲಿ,ಪೂಂಚ್ ವಲಯದಲ್ಲಿ ಭದ್ರತಾ ಪಡೆಗಳು 20 ಚೀನೀ ಹ್ಯಾಂಡ್ ಗ್ರೆನೇಡ್‍ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.

Tags:
error: Content is protected !!