Mysore
28
clear sky

Social Media

ಗುರುವಾರ, 22 ಜನವರಿ 2026
Light
Dark

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಗಜಪಡೆಗೆ 2ನೇ ಹಂತದ ಸಿಡಿಮದ್ದು ತಾಲೀಮು

mysore dassera 2025

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಇಂದು ಎರಡನೇ ಹಂತದ ಸಿಡಿಮದ್ದು ತಾಲೀಮು ನಡೆಸಲಾಯಿತು.

ದಸರಾ ವಸ್ತು ಪ್ರದರ್ಶನ ಮೈದಾನದ ವಾಹನಗಳ ನಿಲುಗಡೆ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ಎರಡನೇ ಹಂತದ ತಾಲೀಮು ಯಶಸ್ವಿಯಾಗಿ ‌ನೆರವೇರಿತು.

ಇದನ್ನೂ ಓದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1,425 ಹುದ್ದೆಗಳು

ಅರಮನೆಯ ಫಿರಂಗಿಗಾಡಿಗಳಿಂದ ಕುಶಾಲತೋಪು ಸಿಡಿಸಿದ ತಾಲೀಮಿನಲ್ಲಿ ಎಲ್ಲಾ 14 ಆನೆಗಳು, ಅಶ್ವಾರೋಹಿ ದಳ ಭಾಗಿಯಾಗಿದ್ದವು. ಎರಡನೇ ಬಾರಿಯೂ ಹೇಮಾವತಿ, ರೂಪ ಮತ್ತು ಶ್ರೀಕಂಠ ಆನೆಗಳು ಕುಶಾಲತೋಪು ಸಿಡಿತದ ತಾಲೀಮಿನಲ್ಲಿ ಭಾಗವಹಿಸಿದ್ದವು.

ಸಿಡಿಮದ್ದು ತಾಲೀಮು ಫೈರಿಂಗ್ ಕಾರ್ಯದಲ್ಲಿ ಭಾಗಿಯಾಗಿದ್ದ 30ಕ್ಕೂ ಹೆಚ್ಚು ಸಿಎಆರ್ ಪೊಲೀಸರು ಏಳು ಫಿರಂಗಿ ಗಾಡಿಗಳಿಂದ, ತಲಾ ಮೂರು ಬಾರಿಯಂತೆ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಿದರು.

ದಸರಾ ಗಜಪಡೆ ಕುಶಾಲತೋಪು ಸಿಡಿತದ ಸದ್ದಿಗೆ ಬೆದರದೇ ಆತ್ಮಸ್ಥೈರ್ಯ ಪ್ರದರ್ಶಿಸಿದ್ದು, ಅಶ್ವಾರೋಹಿ ದಳದ ಕೆಲ ಕುದುರೆಗಳು ಮಾತ್ರ ಸಿಡಿಮದ್ದಿನ ಸದ್ದಿಗೆ ವಿಚಲಿತವಾದವು.

2ನೇ ಹಂತದ ಸಿಡಿಮದ್ದು ತಾಲೀಮಿನಲ್ಲಿ ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್, ಸಿಎಫ್ ರವಿಶಂಕರ್, ಡಿಸಿಎಫ್ ಡಾ. ಪ್ರಭುಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:
error: Content is protected !!