Mysore
17
clear sky

Social Media

ಬುಧವಾರ, 21 ಜನವರಿ 2026
Light
Dark

ಧರ್ಮಸ್ಥಳ | ಮುಂದುವರೆದ ಶೋಧ : ಮತ್ತೆರಡು ತಲೆ ಬುರುಡೆ ಪತ್ತೆ

Temporary Shed Built After Bone Discovery; Excavation Continues by SIT

ಬೆಳ್ತಂಗಡಿ : ಬಂಗ್ಲೆಗುಡ್ಡ ಕಾಡಿನಲ್ಲಿ ಮುಂದುವರಿದ ಎಸ್‌ಐಟಿ ಶೋಧದ ವೇಳೆ ಮತ್ತೆ ಎರಡು ತಲೆ ಬುರುಡೆಗಳು ಪತ್ತೆಯಾಗಿರುವುದಾಗಿ ಎಸ್‌ಐ‌ಟಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಬಂಗ್ಲೆ ಗುಡ್ಡದಲ್ಲಿ ಬುಧವಾರ ಹಲವು ತಲೆ ಬುರುಡೆಗಳು ಪತ್ತೆಯಾಗಿದ್ದವು. ಬುಧವಾರ ಗುರುತಿಸಿದ ಜಾಗದಲ್ಲಿ ಇಂದು(ಗುರುವಾರ) ಮತ್ತೆ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿ ಇನ್ನೆರಡು ಬುರುಡೆಗಳನ್ನು ಹಾಗೂ ಅವಶೇಷಗಳನ್ನು ಸಂಗ್ರಹಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ಗೊತ್ತಾಗಿದೆ.

ಗುಡ್ಡದಮೇಲೆ ಚದುರಿಕೊಂಡ ರೀತಿಯಲ್ಲಿ ಎಲಿಬುಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದ್ದು, ಅಲ್ಲಿ ಲಭಿಸಿದ ಎಲ್ಲ ವಸ್ತುಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್‌ಐ‌ಟಿ ತಂಡ ಮಾಡಿದೆ.

ಇದೀಗ ಗುರುತಿಸಿದ ಸ್ಥಳಗಳಿಂದ ಒಟ್ಟು 7 ತಲೆಬುರುಡೆಗಳು ಪತ್ತೆಯಾಗಿದ್ದು, ಸಾಕಷ್ಟು ಎಲುಬಿನ ಭಾಗಗಳು ಲಭಿಸಿದೆ.

Tags:
error: Content is protected !!